ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರು ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಅನ್ಯಾಯವಾಗದಂತೆ ಸಚಿವರಿಗೆ ಮನವಿ

ಬಾಗಲಕೋಟೆ :ಮಹಾಲಿಂಗಪುರ
ನಮ್ಮ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಮೈಸೂರು ದಸರಾ ಸ್ಥಬ್ಧ ಚಿತ್ರ ರಚನೆ ಮಾಡಲು ಅವಕಾಶ ನೀಡದೆ ಬೇರೆ ಜಿಲ್ಲೆಯ ಕಲಾವಿದರಿಗೆ ಈ ಕೆಲಸವನ್ನು ಕೊಡುತ್ತಿರುವುದು ಜಿಲ್ಲೆಯ ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಮ್ಮ ಜಿಲ್ಲೆಯ ಕಲಾವಿದರು ಪ್ರತೀ ವರ್ಷ ಜಿಲ್ಲೆಯ ಕಲೆಯ ಪರಂಪರೆಯನ್ನು ಮೈಸೂರು ದಸರಾದಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಪ್ರದರ್ಶನವನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರದ ಎಂತಹ ಕಾರ್ಯಕ್ರಮವಿದ್ದರೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಸಹ ಜಿಲ್ಲೆಯ ಜೊತೆಗೆ ನಿಂತು ಕೆಲಸ ಮಾಡುತ್ತಾ ಬಂದಿದ್ದಾರೆ.
ಈ ದಸರಾದಲ್ಲಿ ಅವರಿಗೆ ಅವಕಾಶ ವಂಚನೆ ಮಾಡಲು ಕಾರಣವೇನು? ಗುಣಮಟ್ಟದ ಕಲಾವಿದರಿದ್ದರೂ ಬೇರೆಯವರನ್ನು ಅಹ್ವಾನಿಸುತ್ತಿರುವ ಅಧಿಕಾರಿಯಾದ ಗ್ರಾಮೀಣ ಕೈಗಾರಿಕಾ ಇಲಾಖೆಯ ಅಧಿಕಾರಿಯಾದ ಡಿ.ಡಿ.ಸಿದ್ರಾಯ್ ಬಲ್ಲುಳಗಿ ಉಪ ನಿರ್ದೇಶಕರು ಇವರು ಯಾವುದೋ ಒಂದು ಆಮಿಷಕ್ಕೆ ಅನ್ಯ ಜಿಲ್ಲೆಯ ಕಲಾವಿದರ ಜೊತೆಗೆ ಒಪ್ಪಂದ ಮಾಡಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಗೆ ಮತ್ತು ನಮ್ಮ ಜಿಲ್ಲೆಯ ಕಲಾವಿದರುಗಳಿಗೆ ಅತ್ಯಂತ ಅನ್ಯಾಯವಾಗುತ್ತದೆ ಮತ್ತು ಈ ಅನ್ಯಾಯವನ್ನು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರು ಇದರ ಬಗ್ಗೆ ಗಮನ ಹರಿಸಿ ತಕ್ಷಣ ಮಧ್ಯಸ್ಥಿಕೆ ವಹಿಸಬೇಕು ತಾವು ಜಿಲ್ಲೆಯ ಬಗ್ಗೆ ಮತ್ತು ಕಲಾವಿದರು, ಯುವಕರ ಬಗ್ಗೆ, ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿರುವ ಸಚಿವರೆಂದು ನಾವೆಲ್ಲರೂ ನಂಬಿದ್ದೇವೆ ಮತ್ತು ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಜಿಲ್ಲೆಯ ಕಲಾವಿದರಿಗೆ ಅನ್ಯಾಯವಾಗದಂತೆ ಹಾಗೂ ಬೇರೆಯವರಿಗೆ ಈ ಕಾಮಗಾರಿ ಹಸ್ತಾಂತರ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿ ಈ ಒಂದು ದಸರಾ ಉತ್ಸವದಲ್ಲಿ ನಮ್ಮ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಇಂತಹ ನೀಚ ಕೃತ್ಯವನ್ನು ಎಸಗುತ್ತಿರುವ ಅಧಿಕಾರಿಯ ಮೇಲೆ ಕ್ರಮ ವಹಿಸಿ, ಕಲಾವಿದರಿಗೆ ನ್ಯಾಯ ಕೊಡಿಸಬೇಕು.
ಒಂದು ವೇಳೆ ನಮ್ಮ ಜಿಲ್ಲೆಯ ಕಲಾವಿದರಿಗೆ ಅವಕಾಶ ವಂಚಿತರಾದರೆ ನಾವು ತಕ್ಷಣವೇ ಜಿಲ್ಲೆಯಾದ್ಯಂತ ಹೋರಾಟಕ್ಕೆ ನಿಲ್ಲಬೇಕಾಗುತ್ತದೆ. ಈ ಮುಖಾಂತರ ತಾವು ನ್ಯಾಯ ಕೊಡಿಸುತ್ತೀರೆಂದು ನಿಮ್ಮನ್ನು ನಂಬಿರುತ್ತೇವೆ ಎಂದು
ವೀರ ಸ್ವಾತಂತ್ರ್ಯ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘದ ವತಿಯಿಂದ ಮನವಿ ಸಲ್ಲಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!