ಬಳ್ಳಾರಿ / ಕಂಪ್ಲಿ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಾಮನಿರ್ದೇಶಿತ ಸದಸ್ಯರಾಗಿ ಕೋರಿ ಚನ್ನಬಸವರಾಜ ಅವಿರೋಧವಾಗಿ ಆಯ್ಕೆಗೊಂಡರು.
ನಂತರ ನೂತನ ನಾಮ ನಿರ್ದೇಶಕ ಕೋರಿ ಬಸವರಾಜ ಮಾತನಾಡಿ, ಸ್ಥಳೀಯ ಶಾಸಕ ಜೆ.ಎನ್.ಗಣೇಶ ಆದೇಶದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಮಾರ್ಗದರ್ಶನದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಾಮನಿರ್ದೇಶನ ಸದಸ್ಯನ್ನಾಗಿ ಅವಿರೋಧ ಆಯ್ಕೆ ಮಾಡಿರುವುದು ಖುಷಿ ತಂದಿದೆ. ನಮಗೆ ನೀಡಿರುವ ಸ್ಥಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸೊಸೈಟಿ ಅಭಿವೃದ್ಧಿಗೆ ಸಹಕರಿಸುವ ಜೊತೆಗೆ ರೈತರಿಗೆ ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಕ ಕರೇಕಲ್ ವಿರೇಶ, ಸಹಕಾರ ಸಂಘದ ಅಧ್ಯಕ್ಷ ಕಡೆಮನೆ ನಾಗರಾಜ, ಉಪಾಧ್ಯಕ್ಷೆ ಜಿ.ಅಯ್ಯಮ್ಮ, ನಿರ್ದೇಶಕರಾದ ಕೆ.ದೊಡ್ಡಬಸಪ್ಪ, ಅಳ್ಳಿ ನಾಗರಾಜ, ಪಿ.ಚೊಕ್ಕರಾವ್, ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು, ವಿ.ಬಿ.ನಾಗರಾಜ, ಆಂಜನೇಯಲು, ಗೌಡ್ರು ಅಂಜಿನಪ್ಪ, ಕೆ.ಭಾಸ್ಕರ್‌ರೆಡ್ಡಿ, ಕೆ.ರಾಧ, ಹೆಚ್.ಲಿಂಗಪ್ಪ(ಸರ್ಕಾರಿ ನಾಮಿನಿ), ಮುಖಂಡರಾದ ಕೆ.ಷಣ್ಮುಕಪ್ಪ, ಸಿ.ಆರ್.ಹನುಮಂತ, ವಾಲ್ಮೀಕಿ ರಘು, ಬಳೆ ಮಲ್ಲಿಕಾರ್ಜುನ, ಗಿರೀಶ, ಕುಮಾರ, ಮಾವಿನಹಳ್ಳಿ ಬಸವರಾಜ, ಅಮರೇಗೌಡ, ಸಣಾಪುರ ತಿಪ್ಪೇಸ್ವಾಮಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















