ಬೆಂಗಳೂರು: ಅಕ್ಟೋಬರ್ ತಿಂಗಳ ಎರಡನೇ ಶನಿವಾರ 10-10-2026 ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಕೆ ಪಿ ಟಿ ಸಿ ಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಸಾಂಸ್ಕೃತಿಕ ಚಿಂತಕ, ಹಿಂದೂವಾಣಿ ಪತ್ರಿಕೆಯ ಸಂಪಾದಕ ಶ್ರೀ ಟಿ ಎ ಪಿ ಶೆಣೈ ಅವರು ಸಂಬಂಧಗಳು ಏಕೆ ನಾಜೂಕು ಆಗುತ್ತಿವೆ? ಕುರಿತು ಉಪನ್ಯಾಸ ನೀಡುವರು.
ಸಾಹಿತಿಗಳು, ಚಾರಣಪ್ರಿಯರು, ನಿವೃತ್ತ ನಬಾರ್ಡ್ ಅಧಿಕಾರಿ ಡಾ. ಆರ್ ಎನ್ ಹೆಗಡೆ ಬಂಡಿಮನೆ ಅವರು ಉತ್ತಮ ಆರೋಗ್ಯದ ಗುಟ್ಟು – ಸಂಶೋಧನೆ ಮತ್ತು ಅನುಭವಗಳ ಬುತ್ತಿ ಕುರಿತು ಪಿ ಪಿ ಟಿ ಪ್ರದರ್ಶನದ ಮೂಲಕ ಉಪನ್ಯಾಸ ನೀಡುತ್ತಾರೆ.
ಇದೇ ಸಂದರ್ಭದಲ್ಲಿ ಯಕ್ಷಗಾನ ವಿದ್ವಾಂಸ, ಲೇಖಕ, ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್, ಜಿ ಮೃತ್ಯುಂಜಯ ಹಾಗೂ ಸಂಘಟಕ, ಸಾಹಿತಿ, ಪ್ರಕಾಶಕ ಕ ವೆಂ ನಾಗರಾಜ ಅವರ ಉಪಸ್ಥಿತಿಯಲ್ಲಿ, ಬೆಂಗಳೂರು ವಿಜಯನಗರದ ನಚಿಕೇತ ಮನೋವಿಕಾಸ (ಬುದ್ಧಿಮಾಂದ್ಯರ) ಸಂಸ್ಥೆ ನಡೆಸುತ್ತಿರುವ ಶ್ರೀ ನರಸಿಂಹ ಶೆಣೈ ಹಾಗೂ ಅದೇ ಸಂಸ್ಥೆಯ 30 ವರ್ಷದ ಹೆಣ್ಣು ಮಗಳು (ಆದರೆ 8 ವರ್ಷಗಳ ಬುದ್ಧಿ) ಮನೆಗೆ ಹಿಂದಿರುಗುವಾಗ ಕೆಲವು ತೊಂದರೆ ಅನುಭವಿಸಿದ್ದನ್ನು ಕಂಡು, ಸಹಾಯ ಮಾಡಿದ ಆಟೋ ಚಾಲಕ ಶ್ರೀ ತಿಪ್ಪೇರುದ್ರಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಇದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು




















