ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಇಂಡಿ ಉಪ ವಿಭಾಗ ಹೆಸ್ಕಾಂ ಕಚೇರಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಇಂದು ಸ್ವಚ್ಛತಾ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿ ಉಪವಿಭಾಗದ ಮಾನ್ಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಇವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗದ ಸಹಾಯಕ ಅಭಿಯಂತರರು, 659 ಸಂಘದ ಕೇಂದ್ರ ಸಮಿತಿ ಸದಸ್ಯರು ಉಪ ವಿಭಾಗದ ಎಲ್ಲ ಶಾಖಾಧಿಕಾರಿಗಳು, ಮೇಲ್ವಿಚಾರಕರು, ಪವರ್ ಮ್ಯಾನ್ ಗಳು, ಕಿರಿಯ ಪವರ್ ಮ್ಯಾನ್ ಗಳು, ಕಂದಾಯ ಶಾಖೆಯ ಅಸಿಸ್ಟೆಂಟ್ ಅಕೌಂಟ್ ಆಫೀಸರ್ ಹಾಗೂ ಸಿಬ್ಬಂದಿಯವರು, 24×7 ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರು ಮತ್ತು ಉಪ ವಿಭಾಗದ ಸಮಸ್ತ ಸಿಬ್ಬಂದಿಯವರ ಜೊತೆ ಇಂದು ಸ್ವಚ್ಛತಾ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು.




















