ಬಳ್ಳಾರಿ / ಕಂಪ್ಲಿ : ತಾಲ್ಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮುರಿದಿದ್ದರೆ, ಬಾಗಿದ್ದರೆ ಅಥವಾ ವಿದ್ಯುತ್ ತಂತಿಗಳು ಕೆಳಗೆ ಜೋತು ಬಿದ್ದಿರುವುದು ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ಮಾಹಿತಿ ನೀಡುವಂತೆ ಜೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಸಮಸ್ಯೆ ಕಂಡುಬಂದಲ್ಲಿ ಸಾರ್ವಜನಿಕರು ಆ ಸ್ಥಳದ ನಿಖರ ವಿಳಾಸ ಮತ್ತು ಛಾಯಾಚಿತ್ರದ (ಫೋಟೋ) ಜೊತೆಗೆ ಜೆಸ್ಕಾಂನ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡಬಹುದಾಗಿದೆ :
- ಎ.ಇ.ಇ ಶ್ರೀನಿವಾಸ್ ಪ್ರಸಾದ್: 9449597416
- ಎ.ಇ ಭೀಮೇಶ್: 94808 45163
- ಕಂಪ್ಲಿ ಪಟ್ಟಣ, ರಾಮಸಾಗರ, ನಂ. 10 ಮುದ್ದಾಪುರ ವ್ಯಾಪ್ತಿ: ಎ.ಇ ವಿನೋದ್ ಕುಮಾರ್ (94808 44965)
- ಕಂಪ್ಲಿ ಗ್ರಾಮೀಣ, ಹಂಪಾದೇವನಹಳ್ಳಿ, ಸಣಾಪುರ, ದೇವಸಮುದ್ರ ಭಾಗ: ಎ.ಇ ಮಹಾಂತೇಶ್ ತುಂಬದ್ (94483 97533)
- ಮೆಟ್ರಿ, ಸುಗ್ಗೇನಹಳ್ಳಿ, ದೇವಲಾಪುರ ಭಾಗ: ಎ.ಇ ಸಮೀವುಲ್ಲಾ (94808 44996)
- ಬಿಲ್ಲಿಂಗ್ ಸಂಬಂಧಿತ ದೂರುಗಳು: ವಿಜಯ್ ಕುಮಾರ್ (94808 45141)
- ಪಟ್ಟಣ ವ್ಯಾಪ್ತಿಯ ವಿದ್ಯುತ್ ವ್ಯತ್ಯಯ ದೂರುಗಳು/ಸಹಾಯವಾಣಿ: 94808 45104
ಇದರೊಂದಿಗೆ ಗ್ರಾಹಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಗ್ರಾಮೀಣ ವಿದ್ಯುತ್ ಪ್ರತಿನಿಧಿಗಳನ್ನು (ಲೈನ್ಮನ್) ಸಂಪರ್ಕಿಸಿಯೂ ದೂರು ದಾಖಲಿಸಬಹುದು ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್




















