
ಕೊರಟಗೆರೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧರಘಟ್ಟ ಕ್ಷೇತ್ರದಲ್ಲಿ ಗಾಂಧೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತ ಶ್ರಮದಾನ ಕಾರ್ಯಕ್ರಮವನ್ನು ತಾಲ್ಲೂಕು ದಂಡಾಧಿಕಾರಿಗಳು ಅವರ ಸಿದ್ಧಾಂತಗಳ ಅನುಕಾರಣೆಗಾಗಿ ಇಂದು ಸ್ವಚ್ಛತೆಯ ಆಂದೋಲನಕ್ಕೆ ಚಾಲನೆ ನೀಡಿದರು.
ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಜಯಂತಿಯ ಪ್ರಯುಕ್ತ ಕೊರಟಗೆರೆಯ ಚನ್ನರಾಯನದುರ್ಗ ಹೋಬಳಿಯ ಪುಣ್ಯಕ್ಷೇತ್ರವಾದ ಸಂಜೀವಿನಿ ಪರ್ವತದ ತಪ್ಪಲಿನಲ್ಲಿ ತಾಲೂಕು ಆಡಳಿತ ವತಿಯಿಂದ ಸಹಕಾರ ಮತ್ತು ಸ್ವಚ್ಛತೆಯ ಅಭಿಯಾನ ಹಾಗೂ ಶ್ರಮದಾನವನ್ನು ಯಶಸ್ವಿಯಾಗಿ ನೆರವೇರಿಸಿದರು. ತಹಶೀಲ್ದಾರ್ ಮಂಜುನಾಥ್.ಕೆ ಅವರು ಸ್ವಚ್ಛತಾ ಆಂದೋಲನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಅಧಿಕಾರಿ, ಸಿಬ್ಬಂದಿ ವರ್ಗ, ಸ್ಥಳೀಯ ಮುಖಂಡರು, ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳು ಒಟ್ಟಾಗಿ ರಸ್ತೆಯ ಅಕ್ಕ ಪಕ್ಕ, ದೇವಾಲಯದ ಆವರಣ, ಅನ್ನ ದಾಸೋಹ ಸಮುದಾಯ ಭವನದ ಅಕ್ಕಪಕ್ಕ, ಬೆಟ್ಟದ ಸುತ್ತಮುತ್ತಲಿನ ಪ್ರದೇಶ ಮತ್ತು ಬೆಟ್ಟ ಹತ್ತುವ ದಾರಿ ಮತ್ತು ಮೆಟ್ಟಿಲುಗಳ ಪಕ್ಕದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅಲ್ಲಲ್ಲಿ ಬಿದ್ದಿದ್ದ ವಾಟರ್ ಬಾಟಲ್ ಪ್ಲಾಸ್ಟಿಕ್ ಕವರ್ ಹಾಗೂ ಕಸ ಕಡ್ಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಸಮಾಧಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಪುಣ್ಯ ಕ್ಷೇತ್ರದಲ್ಲಿ ಪ್ರತಿನಿತ್ಯ ಬರುವ ಭಕ್ತಾದಿಗಳು ಹಾಗೂ ಪ್ರವಾಸಿಗರು ಮನಸ ಇಚ್ಛೆ ಗೊತ್ತಿಲ್ಲದೆ ಪ್ಲಾಸ್ಟಿಕ್ ವಸ್ತುಗಳನ್ನು ಬಾಟಲ್ ಗಳನ್ನು ಬಿಸಾಕುತ್ತಾರೆ ಇದರಿಂದ ಪರಿಸರ ಹಾಳಾಗುತ್ತಿದೆ ಅದರ ಅರಿವು ಆ ವಿದ್ಯಾವಂತರಿಗಿಲ್ಲ, ಪ್ಲಾಸ್ಟಿಕ್ ಬಳಕೆಯು ಮೂಕ ಪ್ರಾಣಿಗಳಾದ ಹಸು ಕೋತಿಗಳು ಹಾಗೂ ಪಕ್ಷಿ ಸಂಕುಲವು ತೀವ್ರ ತೊಂದರೆಗಳನ್ನು ಅನುಭವಿಸುತ್ತಿವೆ.
ಸಮಾಜದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಸೇರಿ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಿದರೆ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳು ಸ್ವಚ್ಛವಾಗಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ವರದಿ ಪ್ರಸನ್ನಕುಮಾರ್. ಎಸ್. ಕೊರಟಗೆರೆ




















