ನರಕ ಯಾತನೆ ಕೂಗು ಕೇಳುತ್ತಿದೆ
ಭರವಸೆ ಕಂಗಳು ತೇವಗೊಂಡಿವೆ
ಆರ್ತನಾದ ಎಲ್ಲೆಲ್ಲೊ
ಸಾರಿ ಹೇಳುತ್ತಿದೆ
ಗುಡಿ ಮಸೀದಿ ಚರ್ಚ್ ಕೇಳಿರದ
ಮಡಿ ಮೈಲಿಗೆ ಬಿತ್ತರಿಸದ
ಸ್ಪಂದನ ಇಲ್ಲದ ದೇಹ
ಮೋಹ ದಾಹ ತೀರಿ ಹೋಗಿದೆ
ಉಸಿರು ಕಟ್ಟಿಸುವ ಹಾಗೆ
ಬಸಿರು ನೋವು ತುಂಬಿದ ಬೇಗೆ
ಹಸಿರು ಹೊದಿಕೆ ಮಂಕಾದ ಬಗೆ
ಕೊಸರಿ ಹೋಗುತ್ತಿದೆ ಹೇಳ ಹೆಸರಿಲ್ಲದೆ
ತಾರೆ ಮಿನುಗು
ಕಣ್ಣ ಮಂಪರು ತರಿಸಿ
ಬಣ್ಣ ಮಾಸಿ
ತಣ್ಣಗಾಗಿದೆ
ಹೊರಗೆ ಕಾದು ಕುಳಿತವರು
ನಿರೀಕ್ಷೆ ಹೊತ್ತ ಸಂಬಂಧ
ಪರೀಕ್ಷೆ ಒಡ್ಡಿದ ಪರಮಾತ್ಮ
ಯುದ್ಧ ಮಾಡುತ್ತಲೇ ಇದೆ.
- ರೇಷ್ಮಾ ಕಂದಕೂರ




















