ಚಿಂಚೋಳಿ: ಪಟ್ಟಣದ ಹಾರಕೂಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಚಿಂಚೋಳಿ ತಾಲೂಕಿನ ರೈತರು ಮತ್ತು ನಾಗರಿಕರಿಗಾಗಿ ಪೂರ್ವಭಾವಿ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕ ಅಧ್ಯಕ್ಷರಾದ ವೀರಣ್ಣ ಗಂಗಾಣಿ ಅವರು ಮಾತನಾಡಿ, ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುತ್ತಿರುವ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೈತರಿಗೆ ಸನ್ಮಾನಿಸಿ ಅಭಿನಂದನೆ ಪತ್ರ ನೀಡುವುದು. ಹಾಗೂ ಎತ್ತು ಎತ್ತಿನ ಬಂಡಿಯೊಂದಿಗೆ ಬೃಹತ್ ಮೆರವಣಿಗೆ ಮುಖಾಂತರ ಸರ್ಕಾರವು ತಿಂಗಳಿಗೆ 11,000 ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮತ್ತು ಈಗಾಗಲೇ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ರೈತರಿಗೆ ಪಿಂಚಣಿಯಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.
ಅಕ್ಟೋಬರ್ 28 ,ಬೆಳಿಗ್ಗೆ 10:30 ಕ್ಕೆ ಚಿಂಚೋಳಿಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನೂತನ ತಹಸಿಲ್ ಕಚೇರಿವರೆಗೆ 150ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರು ಮೆರವಣಿಗೆ ನಡೆಸಲಿದ್ದಾರೆ. ಬಳಿಕ ಜೋಡೆತ್ತಿನ ಕೃಷಿಕರಿಗೆ ಮಾಸಿಕ 11,000 ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ತಿಳಿಸಿದರು.
ಈ ಜೋಡೆತ್ತಿನ ಜಾತ್ರೆಯಲ್ಲಿ ತಾಲೂಕಿನ ವಿವಿಧ ಮಠಾಧೀಶರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ರೈತ ಮುಖಂಡರಾದ ಶಂಕರಗೌಡ ಅಲ್ಲಾಪೂರ, ಮಲ್ಲಿಕಾರ್ಜುನ ಬುಶೆಟ್ಟಿ, ಕೆ.ಎಂ. ಬರಿ, ಲಕ್ಷಣ ಅವಂಟಿ, ಅಬ್ದುಲ್ ಬಾಸೀದ್, ಭೀಮಶೆಟ್ಟಿ ಮುರುಡ, ರಾಜಕುಮಾರ್ ತಳವಾರ್,ಹಣಮಂತ ಪೊಜಾರಿ, ಗೋಪಾಲ ಗಾರಂಪಳ್ಳಿ, ಮಲ್ಲು ಹೂಗಾರ್,ಸೂರ್ಯಕಾಂತ ಪಾಟೀಲ್, ಸಂಗಯ್ಯ ಸ್ವಾಮಿ, ವಿರೇಶ್ ಯಂಪಳ್ಳಿ, ಲೋಕೇಶ್ ಸಿಳ್ಳಿಗಿ, ಜಗನಾಥ್ ಗುತ್ತೆದಾರ, ಶ್ರೀಧರ್ ಪಾಟೀಲ್, ಶ್ರೀಶೈಲ ರೆಡ್ಡಿ, ಚಂದ್ರನಾಥ ಪಾಟೀಲ್, ಸಂಗಮೇಶ ಮಲಿ, ಶಿವಶರಣಪ್ಪ ಡೆಂಗಿ,ಪವನ ಪಾಟೀಲ್ ದೇಗಲಮಡಿ, ñವಿವೇಕ್ ಪಾಟೀಲ್, ಚಂದ್ರು ಅವರಾದಿ, ವಿಶ್ವನಾಥ್ ಐನೋಲಿ ಇನ್ನು ಅನೇಕ ರೈತರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















