ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿಮಾಲಯದ ಫ್ರೆಂಡ್‌ಶಿಪ್ ಪೀಕ್ ಏರಿದ ಬಳ್ಳಾರಿಯ ಹೆಡ್ ಕಾನ್ಸ್ಟೇಬಲ್ ರಮೇಶ್ ಕುಮಾರ್

ಬಳ್ಳಾರಿಯ ಹೆಡ್ ಕಾನ್ಸ್ಟೇಬಲ್ ರಮೇಶ್ ಕುಮಾರ್ ಇಂದು ನಗರಕ್ಕೆ ವಾಪಸ್.

ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಶ್ರೀ ಕೆ.ಸಿ. ಕೊಂಡಯ್ಯ ಅವರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ರಮೇಶ್ ಕುಮಾರ್ ಅವರು ಹಿಮಾಲಯದ 5,289 ಮೀಟರ್ (17,352 ಅಡಿ) ಎತ್ತರದಲ್ಲಿರುವ ಫ್ರೆಂಡ್‌ಶಿಪ್ ಪೀಕ್ (Friendship Peak) ಶಿಖರವನ್ನು ಯಶಸ್ವಿಯಾಗಿ ಆರೋಹಣ ಮಾಡಿ ಇಂದು ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಾರೆ.

ಸಾಹಸಮಯ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ರಮೇಶ್ ಕುಮಾರ್ ಅವರು ಕಳೆದ ವರ್ಷ ಬಳ್ಳಾರಿಯಿಂದ ಲೇಹ್–ಲಡಾಖ್‌ವರೆಗೆ ಬೈಕ್ ರೈಡ್ ಮೂಲಕ ತೆರಳಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಿದ್ದರು. ಅವರ ಈ ಸಮಾಜಮುಖಿ ಹಾಗೂ ಸಾಹಸಮಯ ಕಾರ್ಯವನ್ನು ಗುರುತಿಸಿದ ಜಿಲ್ಲಾ ಆಡಳಿತವು ಅವರನ್ನು ಗೌರವಿಸಿ ಸನ್ಮಾನಿಸಿತ್ತು.

ಎವರೆಸ್ಟ್ ಏರುವ ಗುರಿಯತ್ತ ಮತ್ತೊಂದು ಹೆಜ್ಜೆ

2028ರಲ್ಲಿ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಆರೋಹಣ ಮಾಡುವ ಗುರಿಯನ್ನು ಹೊಂದಿರುವ ರಮೇಶ್ ಕುಮಾರ್ ಅವರು, ಈ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ 40 ದಿನಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ತರಬೇತಿಯ ಭಾಗವಾಗಿ ಹಿಮಾಲಯದ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾದ ಫ್ರೆಂಡ್‌ಶಿಪ್ ಪೀಕ್ ಅನ್ನು ಯಶಸ್ವಿಯಾಗಿ ಏರಿ ತಮ್ಮ ಸಾಹಸ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕುದುರೆ ಸವಾರಿ, ಬೈಕ್ ರೈಡಿಂಗ್, ಚಾರಣ, ಹೆಲ್ಮೆಟ್ ಜಾಗೃತಿ ಅಭಿಯಾನ ಸೇರಿದಂತೆ ವಿವಿಧ ಸಾಹಸ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಮೇಶ್ ಕುಮಾರ್ ಅವರು, ತಮ್ಮ ವಿಭಿನ್ನ ಸಾಧನೆಗಳ ಮೂಲಕ ಯುವಜನತೆಗೆ ಸಾಹಸ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ನೀಡುತ್ತಿದ್ದಾರೆ.

ಸ್ನೇಹಿತರ ಬಳಗದಿಂದ ಅದ್ದೂರಿ ಸ್ವಾಗತ

ಫ್ರೆಂಡ್‌ಶಿಪ್ ಪೀಕ್ ಶಿಖರಾರೋಹಣದ ಯಶಸ್ಸಿನ ಬಳಿಕ ಇಂದು ಸಂಜೆ 6:30ರ ಸುಮಾರಿಗೆ ಬಳ್ಳಾರಿ ನಗರಕ್ಕೆ ಆಗಮಿಸಲಿರುವ ರಮೇಶ್ ಕುಮಾರ್ ಅವರನ್ನು ಸ್ವಾಗತಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅವರ ಸ್ನೇಹಿತರ ಬಳಗ ಸಜ್ಜಾಗಿದೆ.

ರಮೇಶ್ ಕುಮಾರ್ ಅವರ ಈ ಸಾಧನೆ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಹಸಮಯ ಸಾಧನೆ ಮುಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆಯಾಗಲಿ ಎಂದು ಬಳ್ಳಾರಿ–ವಿಜಯನಗರ ಜಿಲ್ಲೆಯ ರಮೇಶ್ ಕುಮಾರ್ ಸ್ನೇಹಿತರ ಬಳಗ ಶುಭ ಹಾರೈಸಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!