
ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ಕೌಠಾ (ಕೆ.) ಗ್ರಾಮದಲ್ಲಿ ಶ್ರೀ ವೈಷ್ಣೋದೇವಿ ಮಹಾಶಕ್ತಿ ಪೀಠ ಕೌಠಾ ಕ್ಕೆ ಗ್ರಾಮದ ಪೂಜ್ಯ ಡಾ. ಅಮೃತಪ್ಪ ದೇವಿ ಮುತ್ಯಾರವರ ಪಾವನ ಸನ್ನಿಧಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಸಡಗರವು 12ನೇ ಯ ವರ್ಷದ ನವರಾತ್ರಿ ಉತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಆದ್ದರಿಂದ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ದಿನಾಂಕ 10.10.2026 ರಿಂದ 20.10.26 ವರೆಗೆ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 8 ಎಂಟು ಗಂಟೆಯವರೆಗೆ ದೇವಿ ಮಹಾಯಜ್ಞ, ಪೂಜೆ ಮತ್ತು ಮಹಾ ಮಂಗಳಾರತಿ , ಸಾಯಂಕಾಲ 6 ರಿಂದ 7 ಗಂಟೆವರೆಗೆ ದಾನಮ್ಮ ದೇವಿ ಪುರಾಣವನ್ನು ಪ್ರವಚನಕಾರರು ಶ್ರೀ ವೇ. ಶರಣಕುಮಾರ ಶಾಸ್ತ್ರಿಗಳು ಹಿರೇಮಠ ಹಿತ್ತಲಿ ಶಿರೂರ್ ತಾ. ಆಳಂದ ಜಿಲ್ಲಾ ಕಲ್ಬುರ್ಗಿ ನಡೆಸುವರು. ಸಂಗೀತ ಶ್ರೀ ಭರಮಶೆಟ್ಟಿ ಪಾಟೀಲ್ ತಡಕಲ್ ಆಳಂದ್ ತಾಲೂಕ, ತಬಲಾ ಸೇವೆ ಶ್ರೀ ವೇ. ಷಣ್ಮುಖ ಸ್ವಾಮಿ ಝುಳಕಿ ಕೆ. ತಾ. ಆಳಂದ್ ಇವರಿಂದ ಜರುಗುತ್ತದೆ.
ಸಮಯ ಸಾಯಂಕಾಲ 8 ಘಂಟೆಯಿಂದ ರಾತ್ರಿ 10.30 ನಿಮಿಷವರೆಗೆ ಶ್ರೀ ದೇವಿ ಪ್ರಾಣ ಮತ್ತು ನಾಡಿನ ಹೆಸರಾಂತ ಕವಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ, ನಂತರ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.
ಸರ್ವಭಕ್ತರು ಆಗಮಿಸಿ ಪೂಜ್ಯರ ಆಶೀರ್ವಾದ ಪಡೆದು ಪುನಿತರಾಗಬೇಕು ಎಂದು ಈ ಕಾರ್ಯಕ್ರಮದ ಆಯೋಜಕರು ಶ್ರೀ ಜಗದೀಶ್ ಶ್ರೀ ಗಣೇಶ್ ಹಾಗೂ ಕೌಠ ಕ್ಕೆ ಮತ್ತು ಕೌಠಾ ಬಿ. ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮದ ಸಕಲ ಸದ್ಭಕ್ತರಿಂದ ಸಕಲ ಆದರ ಸ್ವಾಗತ ಕೋರಿದರು.
ವರದಿಗಾರ ಸಂಗಮೇಶ ಚಿದ್ರೆ




















