ವಿರಾಜಪೇಟೆ : ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಾಂಧಿಜಯತಿಯ ಪ್ರಯುಕ್ತ
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಉಪನ್ಯಾಸಕ ವರ್ಗದವರಿಗೆ
ಉಚಿತ ದಂತ ತಪಾಸಣೆ ಹಾಗೂ ದಂತ ಸಂರಕ್ಷಣಾ ಕ್ರಮ ತಿಳಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಕೊಡಗು ದಂತ ಮಹಾ ವಿದ್ಯಾಲಯದ ಉಪಪ್ರಾಶುಪಾಲರು ಹಾಗೂ ಘಟಕದ ಮುಖ್ಯಸ್ಥರಾದ ಡಾ.ಜಿತೇಶ್ ರವರು ಹಲ್ಲಿಗಳ ಸಂರಕ್ಷಣೆಯ ಕುರಿತು ಮಾತನಾಡಿ ಬಾಲ್ಯದಲ್ಲಿ ಹಾಲಿನ ಹಲ್ಲಿನಿಂದ ಹಿಡಿದು ನಂತರ ಮನುಷ್ಯರಲ್ಲಿ ಹಲ್ಲಿನ ಬೆಳವಣಿಗೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುತ್ತ ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಹೇಗೆ ಶುಚಿಗೊಳಿಸಬೇಕೆಂದು ತಿಳಿಸಿದರು.
ಯುವ ಸಮುದಾಯ ಒಳಗೊಂಡಂತೆ ಹೆಚ್ಚಿನವರು
ತಂಬಾಕು ಹಾಗೂ ತಂಬಾಕಿನ ಇತರ ಉತ್ಪನ್ನಗಳನ್ನು ಬಳಸುವ ಮೂಲಕ ಹಲ್ಲು ಹಾಗೂ ಬಾಯಿಯ ಆರೋಗ್ಯ ಕೆಡಿಸಿಕೊಂಡು ಬಾಯಿಯ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ನೀವು ಹೆಚ್ಚಿನ ಸಮಯ ಕಳೆಯುದರಿಂದ ಅವರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು. ಮುಂದುವರೆದು ಸೀಳುತುಟಿಯ ಬಗ್ಗೆ ತಿಳಿಸಿ ನಿಮ್ಮ ಸುತ್ತಮುತ್ತ ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿನಿ ಕೆ.ಜೆ. ಮಾತನಾಡಿ ಪ್ರಶಿಕ್ಷಣಾರ್ಥಿಗಳಾದ ನಿಮಗೆ ಈ ಒಂದು ಕಾರ್ಯಕ್ರಮವು ತುಂಬಾ ಉಪಯುಕ್ತವಾದದ್ದು ಮುಂದಿನ ಹಂತದಲ್ಲಿ ನಿಮ್ಮ ಸುತ್ತಮುತ್ತ ಯಾರಾದರೂ ಇದರಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ವರದಿ: ಪ್ರಿತುನ್ ಪೂವಣ್ಣ




















