ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿವೃತ್ತ ನೌಕರರು ಹಾಗೂ ಸಜ್ಜನ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ದಿನಾಂಕ 4 -10 -2026 ರವಿವಾರ ಬೆಳಿಗ್ಗೆ 10.30 ಕ್ಕೆ ಅಖಿಲ ಭಾರತ ವೀರಶೈವ ಸಜ್ಜನ ಸಮಾಜ ಸುಧಾರಣಾ ಸಂಘ (ರಿ.) ಹುಬ್ಬಳ್ಳಿ ಇದರ ಅಡಿಯಲ್ಲಿ ” ಮುದ್ದೇಬಿಹಾಳ ತಾಲೂಕ ವೀರಶೈವ ಸಜ್ಜನ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ”ಮುದ್ದೇಬಿಹಾಳ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಮುದ್ದೇಬಿಹಾಳ ಎಪಿಎಂಸಿ ಯಾರ್ಡ್ ದಲ್ಲಿರುವ ದಿ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ.ಶ್ರೀ ವಿದ್ವಾನ ಷಟ್ ಸ್ಥಲ ಬ್ರಹ್ಮ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಗುಂಡಕನಾಳ, ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಸಂಗನಬಸಪ್ಪ .ಗು. ಸಜ್ಜನ ವಿಜಯಪುರ, ಉದ್ಘಾಟಕರಾಗಿ ಸ್ಥಳೀಯ ಶಾಸಕರುಗಳಾದ ಸನ್ಮಾನ್ಯ ಸಿ.ಎಸ್ ನಾಡಗೌಡರು, ಗೌರವಾಧ್ಯಕ್ಷರಾಗಿ ಗಾಣಿಗ ಸಮಾಜದ ರಾಷ್ಟ್ರಾಧ್ಯಕ್ಷರಾದ ಶ್ರೀ ಸುರೇಶ ಸಜ್ಜನ, ವಿಶೇಷ ಆಹ್ವಾನಿತರಾಗಿ ಶ್ರೀ ಸುರೇಶ . ರಾ. ಸಜ್ಜನ, ಶ್ರೀ ಶರಣಪ್ಪ. ಅ. ಸಜ್ಜನ, ಶ್ರೀ ಸಾಯಿನಾಥ ದಾಲ್ಮಿಲ್ ಹಾಗೂ ನಿರ್ದೇಶಕರು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ, ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ. ಆರ್. ಯಡಣ್ಣವರು, ಮುದ್ದೇಬಿಹಾಳ
ಹೆಸ್ಕಾಂ ಎಇಇ ಗಳಾದ ಶ್ರೀ ಆರ್. ಆರ್. ಅಂಡಿ, ಮುದ್ದೇಬಿಹಾಳ ಉಪನೊಂದಣಾಧಿಕಾರಿಗಳಾದ ಶ್ರೀ ಸಚಿನ ಖೖನೂರ, ದಿ ತಾಳಿಕೋಟೆ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷರಾದ ಶ್ರೀ ಕಾಶಿನಾಥ. ಚ. ಸಜ್ಜನ, ಪಿ.ಕೆ.ಪಿ.ಎಸ್ ಬ್ಯಾಂಕ್ ಬಿದರಕುಂದಿ ಅಧ್ಯಕ್ಷರಾದ ಶ್ರೀ ಶಂಕ್ರಪ್ಪ. ಗು. ಸಜ್ಜನ ಹಾಗೂ ಗಾಣಿಗ ಸಮಾಜದ ನಿವೃತ್ತ ಶಿಕ್ಷಕರು, ಮುಖ್ಯಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಶ್ರೀ ಪ್ರಭುಗೌಡ. ಚ. ದೇಸಾಯಿ, ಮುದ್ದೇಬಿಹಾಳ ಭೂದಾನಿಗಳಾದ ಶ್ರೀ ಬಸವರಾಜ ಗೋಲಪ್ಪ ಸಜ್ಜನ, ತಾಳಿಕೋಟೆ ಕುಂಟೋಜಿ ಘನಮಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ. ಮ.ಸಜ್ಜನ ಸೇರಿದಂತೆ ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಂ.ಎಸ್ ನಾವದಗಿ, ಸ್ಥಳೀಯ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶ್ರೀ ಪ್ರಭುರಾಜ. ಆರ್ ಕಲಬುರ್ಗಿ, ಬಸವ ಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಇಸ್ಲಾಂಪುರ ತಾಳಿಕೋಟೆ, ಸಜ್ಜನ ಗಾಣಿಗ ಸೇವಾ ಸಂಘ ಅಧ್ಯಕ್ಷರಾದ ಶ್ರೀ ಪ್ರಕಾಶ ಶರಣಪ್ಪ ಸಜ್ಜನ ಇವರೆಲ್ಲರೂ ವೇದಿಕೆಯನ್ನು ಹಂಚಿಕೊಂಡರು.
ಎಲ್ಲಾ ಅತಿಥಿಗಳಿಗೆ ಸನ್ಮಾನಿಸಲಾಯಿತು.
ಗಾನಯೋಗಿ ಪಂಚಾಕ್ಷರಿ ಶ್ರೀ ಸಂಗಮೇಶ ರವರ ತಂಡದಿಂದ ಪ್ರಾರ್ಥನಾ ಗೀತೆಯೊಂದಿಗೆ ಈ ಸಭೆಗೆ ಚಾಲನೆಯನ್ನು ನೀಡಲಾಯಿತು.
ವೇದಿಕೆಯ ಮೇಲೆ ಸಸಿಗೆ ನೀರುಣಿಸುವ ಮುಖಾಂತರ ಉದ್ಘಾಟಿಸಲಾಯಿತು.
ಶಿವರುದ್ರಪ್ಪ ಸಜ್ಜನ ಶಿಕ್ಷಕರು ಸ್ವಾಗತವನ್ನು ಕೋರಿದರು.
ಶ್ರೀ ಬಿಜೂರು ಶಿಕ್ಷಕರು ಮತ್ತು ಶ್ರೀಮತಿ ಸುಮಲತಾ ಸಜ್ಜನ ಸಾಹಿತಿಗಳು ಮತ್ತು ಶಿಕ್ಷಕಿಯರು ನಿರೂಪಣೆಯನ್ನು ಮಾಡಿದರು.
ಶರಣಪ್ಪ ಸಜ್ಜನ ಶಿಕ್ಷಕರು ಮತ್ತು ವೇದಿಕೆಯ ಮೇಲಿದ್ದವರು ಈ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ವರದಿಗಾರರು ಸಂಗಮೇಶ. ಸಿ ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!