
ಕೊಪ್ಪಳ: ದಿನಾಂಕ 5.10.2026ರ ಸೋಮವಾರದಂದು ಶ್ರೀಗವಿಸಿದ್ದೇಶ್ವರ ಮಠದ ಆವರಣದಲ್ಲಿ ಗ್ರಾಮ ಪಂಚಾಯತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು.
ರಾಜ್ಯಮಟ್ಟದಲ್ಲಿ ಶ್ರೀ ಪಂಪನಗೌಡ್ರ ರಾಜ್ಯಾಧ್ಯಕ್ಷರು ಇವರ ನೇತೃತ್ವದಲ್ಲಿ ರಚನೆಯಾಗಿರುವ ಕರ್ನಾಟಕ ರಾಜ್ಯ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ನೌಕರರ ಸಂಘ ರಾಜ್ಯ ಘಟಕದ ಅಡಿಯಲ್ಲಿ ನೂತನವಾಗಿ ಕೊಪ್ಪಳ ಜಿಲ್ಲಾ ಘಟಕ ರಚಿಸಲಾಯಿತು.
ಕೊಪ್ಪಳ ಜಿಲ್ಲಾ ನೂತನ ಘಟಕದಲ್ಲಿ ಗೌರವಾಧ್ಯಕ್ಷರಾಗಿ ಶ್ರೀಚಂದಪ್ಪ ಗುಡಿಮನಿ ,ಜಿಲ್ಲಾ ಅಧ್ಯಕ್ಷರಾಗಿ ಶ್ರೀಮತಿ ಗವಿಸಿದ್ದಮ್ಮ ಗುಳಗಳಿ, ಉಪಾಧ್ಯಕ್ಷರಾಗಿ ಶ್ರೀಅಲ್ಲಾ ಸಾಬ್ ನದಾಫ್, ಕಾರ್ಯದರ್ಶಿಯಾಗಿ ಶ್ರೀಮಾರುತಿ ಹೊಸಳ್ಳಿ, ಕಾನೂನು ಸಲಹೆಗಾರರಾಗಿ ಶ್ರೀಮತಿ ಮಂಗಳಾ, ಸಂಘಟನೆ ಕಾರ್ಯದರ್ಶಿ- ಶ್ರೀಮತಿ ಅಕ್ಕಮಹಾದೇವಿ, ಸಂಚಾಲಕರು ಶ್ರೀಮತಿ ಅಕ್ಕಮಹಾದೇವಿ ಬಿಚ್ಚೂರ್, ನಿರ್ದೇಶಕರಾಗಿ- ಶ್ರೀಬಸವಂತಪ್ಪ, ಶ್ರೀಇಂದ್ರಪ್ಪ ಕೋಳೂರ್, ಶ್ರೀಮತಿ ಶಾಂತಾ ಎನ್. ತಾಳಿ, ಶ್ರೀಬುಗ್ರಿಗೌಡ ಗಾಳಿ ಇವರನ್ನು ಎಲ್ಲರ ಒಮ್ಮತದಿಂದ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.




















