
ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಕಾವೇರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪುಟ್ಟೇಗೌಡ ಮಾಜಿ ಸೈನಿಕರು, ಭಿಕ್ಷೇಶ, ಪುಷ್ಪಲತಾ, ಗೀತಾ ಸೇರಿದಂತೆ ಇನ್ನೂ ಹಲವರು 1990- 1991 ಸಾಲಿನ ವಿದ್ಯಾರ್ಥಿಗಳು ದಿನಾಂಕ 4/10/2026 ರಂದು ಮೊದಲು ಹೆಬ್ಬಾಲೆ ಕಾವೇರಿ ಸಂಯುಕ್ತ ಪ್ರೌಢಶಾಲೆಗೆ ಭೇಟಿ ನೀಡಿ ನಂತರ ಎಲ್ಲರೂ ಕಾಂಗ್ರೆಸ್ ನಾಯಕರು, ಉದ್ಯಮಿಗಳು ಸಮಾಜ ಸೇವಕರು ಇರುವ ಸಿದ್ಲಿಂಗಪುರದ ನಾಪಂಡ ಮುದ್ದಪ್ಪ ಮತ್ತು ನಾಪಂಡ ಮುತ್ತಪ್ಪ ರವರ ಮನೆಗೆ ಭೇಟಿ ನೀಡಿ ಅವರ ತಾಯಿಯಾದ ನಾಪಂಡ ಭೋಜಮ್ಮ ಅವರನ್ನು ಹೃತ್ಪೂರ್ವಕವಾಗಿ ಗೌರವಿಸಿ ಅವರಿಂದ ಆಶೀರ್ವಾದವನ್ನು ಪಡೆದು ಅವರದೇ ವಾಹನಗಳಲ್ಲಿ ಮಾಲಂಬಿ ಬೆಟ್ಟಕ್ಕೆ ತೆರಳಿ ಎಲ್ಲರೂ ಸೇರಿ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಮುದ್ದಪ್ಪ ಹಾಗೂ ಮುತ್ತಪ್ಪ ರವರ ತೋಟದಲ್ಲಿ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಏರ್ಪಡಿಸಿ ಬಾಲ್ಯದ ಜೀವನದ ಸವಿ- ಸವಿ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಸಂತೋಷದಿಂದ ಕಾಲ ಕಳೆದು ನಂತರ ಮತ್ತೆ ಮುದ್ದಪ್ಪ ಮತ್ತಪ್ಪರವರ ಮನೆಗೆ ಬಂದು ಕಾಫಿ ಸೇವಿಸಿ ತಮ್ಮ ಮನೆಗಳಿಗೆ ತೆರಳಿದರು.




















