ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವೆಂಬರ್ 14, 15 ರಂದು ಬಳ್ಳಾರಿಯಲ್ಲಿ ಸಾಹಿತ್ಯ ಜಾತ್ರೆ: ಸಮ್ಮೇಳನಾಧ್ಯಕ್ಷರಾಗಿ ಸಿ.ಜಿ.ಹಂಪಣ್ಣ ಸರ್ವಾನುಮತದಿಂದ ಆಯ್ಕೆ.

ಬಳ್ಳಾರಿ: ಮುಂಬರುವ ನವೆಂಬರ್ 14 ಮತ್ತು 15 ರಂದು ಬಳ್ಳಾರಿ ನಗರದಲ್ಲಿ ನಡೆಯಲಿರುವ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಚಲನಚಿತ್ರ ಕಥೆಗಾರ, ನಿರ್ಮಾಪಕ ಹಾಗೂ ಸಾಹಿತಿ ಸಿ.ಜಿ.ಹಂಪಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಚೋರನೂರು ಟಿ. ಕೊಟ್ರಪ್ಪ, ರಾಮನಮಲಿ ಹಾಗೂ ಪಿ.ಆರ್. ವೆಂಕಟೇಶ್ ಅವರ ಹೆಸರುಗಳು ಪ್ರಸ್ತಾಪವಾದವಾದರೂ, ಅಂತಿಮವಾಗಿ ಸಿ.ಜಿ.ಹಂಪಣ್ಣ ಅವರ ಹೆಸರನ್ನು ಸಭೆಯು ಸರ್ವಸಮ್ಮತಿಯಿಂದ ಅಂಗೀಕರಿಸಿತು.

ಬಹುಮುಖ ಪ್ರತಿಭೆಯ ಹಂಪಣ್ಣ :

1938 ಆಗಸ್ಟ್ 27 ರಂದು ಚೇಳ್ಳಗುರ್ಕಿಯಲ್ಲಿ ಜನಿಸಿದ ಸಿ.ಜಿ.ಹಂಪಣ್ಣ ಅವರು ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. 1958ರಲ್ಲಿ ಮದ್ರಾಸ್ ಇಂಟರ್ ಮೀಡಿಯೇಟ್ ಪರೀಕ್ಷೆ ತೇರ್ಗಡೆಯಾದ ಇವರು, ‘ಸಂಯುಕ್ತ ಕರ್ನಾಟಕ’, ‘ಮಲೆನಾಡು ಮಾಸಪತ್ರಿಕೆ’ ಹಾಗೂ ‘ಈ ನಮ್ಮ ಕನ್ನಡನಾಡು’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ‘ಕನ್ನಡ ಸಿಂಧೂರ’ ಎಂಬ ಪತ್ರಿಕೆಯನ್ನು ಸ್ವತಂತ್ರವಾಗಿ ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.
ಚಿತ್ರರಂಗದಲ್ಲಿ ಕಥೆಗಾರರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಹಂಪಣ್ಣ ಅವರು ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ‘ಕನ್ನಡ ನಾಡು ಸೊಬಗಿನ ಬೀಡು’, ‘ಪ್ರೇಮಪಾಶ’, ‘ದಾರಿದೀಪ’, ‘ವಿಧಿವಿಲಾಸ’, ‘ನಂದನವನ’, ‘ಕಾಣಿಕೆ’, ‘ಒಡೆಯಿತು ಒಲವಿನ ಕನ್ನಡಿ’ ಹಾಗೂ ‘ದೈವ ಸಂಕಲ್ಪ’ ಸೇರಿದಂತೆ ಒಟ್ಟು 19 ಪ್ರಮುಖ ಕೃತಿಗಳನ್ನು ಇವರು ರಚಿಸಿದ್ದಾರೆ. ಇವರ ಜೀವಮಾನದ ಸಾಧನೆಗೆ ಪ್ರತಿಷ್ಠಿತ ‘ಡಾ. ಡಿ.ವಿ. ಗುಂಡಪ್ಪ ಪ್ರಶಸ್ತಿ’ ಸೇರಿದಂತೆ ಹತ್ತು ಹಲವು ಗೌರವಗಳು ಲಭಿಸಿವೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!