ಶಿರಸಿ: ಇದೇ ದಿ. 24.10.2026ನೇ ನಾಲ್ಕನೇ ಶನಿವಾರ ಇಳಿಹೊತ್ತು 4 ಘಂಟೆಗೆ ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಅಂಜಿಯೋ ಪ್ಲಾಸ್ಟಿ ಅಂದರೆ ಏನು? ಏಕೆ? ಹೇಗೆ? ಹಾಗೂ ಮೂಳೆಗಳ ಸವೆತ ತಡೆಯಬಹುದೇ?
ಕುರಿತು ಶಿರಸಿಯ ವೆಲ್ ನೆಸ್ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಕೆ. ಪ್ರಜ್ವಲ್ ಚಂದ್ರ ಹಾಗೂ ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಯೋಗೇಶ್ ಮಧುಕರ್ ಪಡುವಾಣಿ ಆವರಿಂದ ಆರೋಗ್ಯ ಸಲಹೆ ಕಾರ್ಯಕ್ರಮ ಆಯೋಜಿಸಿದೆ.
ಆಸಕ್ತರು ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸೃಜನ ಶೀಲವನ್ನು ಬೆಳೆಸಿಕೊಳ್ಳಬಹುದು ಎಂದು ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ವಿನಂತಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು




















