
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾದ ಸೈಯದ್ ನಯೀಮ್ ಇವರು ಸುಮಾರು ಎರಡು ವರ್ಷಗಳಿಂದ ತಮ್ಮ ಪಕ್ಷದ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಮೊದಲು ನಂಜನಗೂಡು ತಾಲೂಕಿನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಇವರು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ್ದರಿಂದ ರಾಜ್ಯ ಗೌರವ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.
ಇವರ ಹೆಸರು ಕೇಳಿದರೆ ಭ್ರಷ್ಟ ಅಧಿಕಾರಿಗಳು ಭಯಪಡುತ್ತಾರೆ ಅನ್ಯಾಯ ಎಲ್ಲೇ ನಡೆಯುತ್ತಿದ್ದರೂ ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಹಾಜರಾಗಿ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತಾ ನಂಜನಗೂಡು ತಾಲೂಕಿನಾದ್ಯಂತ ಜನಪ್ರಿಯರಾಗಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಇರುವಾಗ ಪ್ರತಿಭಟನೆ ನಡೆಸಿ ವೈದ್ಯರನ್ನು ನೇಮಿಸಿದ್ದಾರೆ. ತಾಲೂಕು ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿ ರೈತರಿಗೆ ನೆರವಾಗಿದ್ದಾರೆ. ಜಾತಿ ಆದಾಯ ಪತ್ರಗಳನ್ನು ವಿಳಂಬವಾಗಿ ನೀಡಿದಾಗ ಆ ಕಾರ್ಯವನ್ನು ಒಂದೆರಡು ದಿನಗಳನ್ನು ನೀಡುವಂತೆ ಮಾಡಿದ್ದಾರೆ. ರಸ್ತೆಗಳಲ್ಲಿ ನಾಮ ಫಲಕಗಳನ್ನು ಅಳವಡಿಸಿದ್ದಾರೆ. ವೇಶ್ಯಾವಾಟಿಕೆಗಳನ್ನು ನಿಲ್ಲಿಸಿದ್ದಾರೆ ಹೀಗೆ ಒಂದಲ್ಲ ಎರಡಲ್ಲ ಹಲವಾರು ಸಮಸ್ಯೆಗಳ ಬಗ್ಗೆ ಮಾಡಿ ಜನರ ಆಶೀರ್ವಾದವನ್ನು ಪಡೆದಿದ್ದಾರೆ. ಇವರು ಜಾತಿ ಧರ್ಮವನ್ನು ಬೇಧ ಮಾಡದೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ.




















