ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಸಂತೋಷ್ ವರ್ಣೇಕರ ಅವರು ಪ್ರತಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಉದ್ಯೋಗ ಮೇಳಗಳನ್ನು ಪ್ರತಿ ತಾಲೂಕ / ಹೋಬಳಿ ಮಟ್ಟದಲ್ಲಿ ಏರ್ಪಡಿಸಿ ನಿರುದ್ಯೋಗ ಯುವಕ – ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಇಚ್ಛೆ ನನ್ನದು. ನಿಮ್ಮ ಅಮೂಲ್ಯವಾದ ಮತವನ್ನು ಯೋಗ್ಯವಾದ ನಿಮ್ಮಯ ಶ್ರೇಯಸ್ಸಿಗೆ ಸ್ಪಂದನೆ ನೀಡುವ ವ್ಯಕ್ತಿಯಾಗಿ ಮತ್ತು ಸರ್ಕಾರಿ / ಖಾಸಗಿ ನೌಕರರ, ನಿರುದ್ಯೋಗ ಯುವಕ / ಯುವತಿಯರ ಮೂಲ ಅಗತ್ಯವಾದ ಉದ್ಯೋಗ ಕೊಡಿಸುವಲ್ಲಿ ಮತ್ತು ನಿಮ್ಮಯ ಹಕ್ಕುಗಳಿಗೆ, ಸೌಲಭ್ಯಗಳಿಗೆ ಚ್ಯುತಿ ಬಂದಲ್ಲಿ ನಿಮ್ಮ ಪರವಾಗಿ ಹೋರಾಡಲು ನಾನು ಯಾವತ್ತೂ ಸಿದ್ದ ನಿಮ್ಮ ಸೇವೆಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಬೇಕು ಇದು ನನ್ನ ಮನವಿ ಎಂದು ತಿಳಿಸಿದರು.
ವರದಿ – ಸದಾಶಿವ ಭೀ ಎಂ




















