ಇಂಡಿ:ತಾಲೂಕಾ ಜೆಡಿಎಸ್ ಬಂಜಾರಾ ಸಮಾಜದ ಸಭೆಯು ಹಂಜಗಿ ಗ್ರಾಮದಲ್ಲಿ ನಡೆದಿದ್ದು. ಕಾರ್ಯಕರ್ತರ ಸಭೆಯನ್ನು ನಾಗಠಾಣ ಶಾಸಕರಾದ ಶ್ರೀದೇವಾನಂದ ಉದ್ಘಾಟಿಸಿ ಮಾತನಾಡುತ್ತಾ 2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಖಾಂತರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚರತ್ನ ಯೋಜನೆಯ ಅನುಷ್ಠಾನಕ್ಕೆ ಇಂಡಿ ಮತಕ್ಷೇತ್ರದ ಸಮಸ್ಥ ಬಂಜಾರಾ ಸಮಾಜ ಬಿ ಡಿ ಪಾಟೀಲರನ್ನು ಬೆಂಬಲಿಸಿ.ಯಾವುದೆ ಹಣ,ಜಾತಿ,ಮತ, ಆಮಿಷಗಳಿಗೆ ಬಲಿಯಾಗದೆ ಬಡವರ ಪರವಾದ ಹೋರಾಟಗಾರನ್ನು ಚುನಾಯಿಸೋಣ, ಭವಿಷ್ಯದ ದಿನಗಳಲ್ಲಿ ನೆನಗುದ್ದಿಗೆ ಬಿದ್ದ ನೀರಾವರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ನಾವುಗಳು ಪ್ರಯತ್ನ ಮಾಡೋಣವೇಂದು ಮಾತನಾಡಿದರು. ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನನ್ನಗೆ ಎರಡು ಬಾರಿ ಜಿಲ್ಲಾ ಪಂಚಾಯತ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಂಜಾರಾ ಸಮಾಜ ಬೆಂಬಲಿಸಿದೆ,ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಇಚ್ಚಾಶಕ್ತಿ ಹೋಂದಿದ್ದೇನೆ,ಬಡವರ, ನಿರುದ್ಯೋಗಿಗಳ,ಉಳೆಹೋಗುವ ಬಡಮಕ್ಕಳ ಶಿಕ್ಷಣ, ಗುಣಮಟ್ಟದ ಆರೋಗ್ಯ ಮುಂತಾದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ನನ್ನನು ಬೆಂಬಲಿಸಿ ಎಂದು ಬಂಜಾರಾ ಸಮಾಜದ ಮುಂದೆ ಶಿರಸಾಸ್ಟಾಂಗ ನಮಸ್ಕಾರ ಮಾಡಿ ಬೆಂಬಲ ಯಾಚಿಸಿದರು.ವೇದಿಕೆ ಮೇಲೆ ಸಾನಿಧ್ಯವನ್ನು ಲಿಂಗಸೂರದ ಸಿದ್ದಲಿಂಗ ಮಹಾರಾಜರು,ತೋರವಿಯ ಗೋಪಾಲ ಮಹಾರಾಜರು ಉಪಸ್ಥಿತರಿದ್ದರು, ಅತಿಥಿಗಳಾಗಿ,ಹಸನಲಾಲ ತಾಂಬೆ,ಮಕಬುಲ ವಾಲಿಕಾರ,ಮೌಲಾಲಿ ಅತ್ನೂರ, ಶ್ರೀ ಶೈಲಗೌಡ ಪಾಟೀಲ,ಬಸುಗೌಡ ಬಿರಾದಾರ, ಗಂಗಾಧರಗೌಡ ಬಿರಾದಾರ,ಶ್ರಿಶೈಲ ಪಾಯಕರ,ಡಾ ಎಮ್ ಕೆ ಶೇಖ್,ಡಾ ರಮೇಶ ರಾಠೋಡ, ಸಿದ್ದು ಡಂಗಾ,ಅಲಭಕ್ಷ ಸಯ್ಯದ್, ರಮೇಶ್ ರಾಠೋಡ,ಮಹಿಬೂಬ ಬೇವನೂರ, ಬಾಳು ರಾಠೋಡ, ಜಗದೀಶ ರಾಠೋಡ, ಸಚಿನ್ ರಾಠೋಡ, ಮಿಥುನ ರಾಠೋಡ,ಸಂಜು ರಾಠೋಡ,ಗುರು ಜಾದವ್,ನಾಯಕರಾದ ಬಾಬು ರಾಠೋಡ,ಕಾರಬಾರಿ ಮೇಗು ರಾಠೋಡ,ಬಿ ಡಿ ಪವಾರ,ಹಾಮು ರಾಠೋಡ,ಪಿಂಟು ಜಾದವ್, ದೇಸಾಯಿ ರಾಠೋಡ,ನರಸಿಂಗ ರಾಠೋಡ, ಲಕ್ಷ್ಮಣ ರಾಠೋಡ,ಗಂಗಾರಾಮ ಪವಾರ, ಮಿಥುನ ರಾಠೋಡ,ಜೀತಾಲಾಲ ರಾಠೋಡ,ಗುರು ರಾಠೋಡ,ರವಿ ಜಾದವ್, ಗಣಪತಿ ರಾಠೋಡ,ರಾವುಲ ಜಾದವ್ ಮುಂತಾದ ನಾಯಕರು ಉಪಸ್ಥಿತರಿದ್ದರು
-ಅರವಿಂದ್ ಕಾಂಬಳೆ ಇಂಡಿ