ಔರಾದ: ಪಂಚಾಯತ ರಾಜ್ ಇಲಾಖೆಯಿಂದ ಹಮ್ಮಿಕೊಂಡಿರುವ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ತಾಲೂಕಿನ 21 ಪಂಚಾಯತಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಅಭಿಯಾನದ ಮುಖ್ಯ ಉದ್ದೇಶ ಪಂಚಾಯತಗಳ ಪ್ರತಿ ಹಳ್ಳಿ ಹಾಗೂ ತಾಂಡಗಳ ಜನರಿಗೆ (NCD) ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಕ್ಷಯರೋಗ ಹಾಗೂ ಮಕ್ಕಳ ಅಪೌಷ್ಟಿಕತೆ ಪ್ರತಿ ತಿಂಗಳು ಆರೋಗ್ಯ ಇಲಾಖೆಯವರ ಸಹಕಾರದಿಂದ ನಮ್ಮ ಪಂಚಾಯತ ಆರೋಗ್ಯ ಕೀಟಗಳಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇಗಾಗಲೆ ಜಿಲ್ಲಾ ಪಂಚಾಯತ ವತಿಯಿಂದ ತಾಲೂಕಿನ ಎಲ್ಲಾ ಪಂಚಾಯತಗಳಿಗೆ ಆರೋಗ್ಯ ತಪಾಸಣೆಯ ಕಿಟ್ ಬಂದಿದೆ ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು ಅವರವರ ಹಳ್ಳಿ ಮತ್ತು ತಾಂಡಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆಯಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬೀರೇಂದ್ರ ಸಿಂಗ್ ರವರು ತಿಳಿಸಿದರು.
ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಆದೇಶದಂತೆ ಪಂಚಾಯತ ಸಹಾಯಕ ನಿರ್ದೇಶಕರಾದ ಶ್ರೀ ಸುದೇಶಕುಮಾರ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಪಂಚಾಯತಗಳಲ್ಲಿ ಅನಮೀಯಾ ಮುಕ್ತತೆ, ಮುಟ್ಟಿನ ನೈರ್ಮಲ್ಯತೆ, ಕ್ಷಯರೋಗ, ಬಾಲ್ಯವಿವಾಹ, ತಡೆಗಟ್ಟುವುದು ಹಾಗೂ ಅಪೌಷ್ಟಿಕತೆ ಮತ್ತು ರಕ್ತದೊತ್ತಡ, ಮಧುಮೇಹ ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಪಂಚಾಯತ ಸಭಾಂಗಣದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಈ ಅಭಿಯಾನದ ತಾಲೂಕ ಸಂಯೋಜಕರಾದ ಅಮರನಾಥ ಮುಕ್ತೆದಾರ ತಿಳಿಸಿದರು.
ತಾಲೂಕಿನ ಪಂಚಾಯತಗಳಲ್ಲಿ ತರಬೇತುದಾರರಾಗಿ ಶಿಕ್ಷಣ ಇಲಾಖೆಯಿಂದ ಜಗದೀಶಕುಮಾರ (BRP), ಜ್ಯೋತಿ (CRP), ಛಾಯಾ (CRP), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಶೋಭಾವತಿ, ಆರೋಗ್ಯ ಇಲಾಖೆಯಿಂದ ರಾಧಮ್ಮಾ, ಹಾಗೂ ಈ ಅಭಿಯಾನದ ತಾಲೂಕ ಸಂಯೋಜಕ ಅಮರನಾಥ ಮುಕ್ತೆದಾರ ಇವರಿಂದ ಪಂಚಾಯತಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇಗಾಗಲೆ 21 ಪಂಚಾಯತಗಳಲ್ಲಿ 20 ಪಂಚಾಯತಗಳ ತರಬೇತಿ ಮುಗಿದಿದೆ ಇನ್ನೂಳಿದ ಪಂಚಾಯತಗಳ ತರಬೇತಿ ಮುಗಿದ ನಂತರ ಆಯಾ ಪಂಚಾಯತನ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯವರ ಜೋತೆಗೂಡಿ ತಪಾಸಣೆ ಮಾಡುವ ಕೆಲಸ ಪ್ರಾರಂಭ ಮಾಡುತ್ತೆವೆ ಎಂದು ತಾಲೂಕ ಸಹಾಯಕ ನಿರ್ದೇಶಕರಾದ ಶ್ರೀ ಸುದೇಶಕುಮಾರರವರು ತಿಳಿಸಿದರು.
ಶ್ರೀಮತಿ ಗಾಯತ್ರೀ ತಾಲೂಕಾ ಆರೋಗ್ಯ ಅಧಿಕಾರಿ (ಔರಾದ ಬಾ): ಸಮುದಾಯದ ಯೋಗಕ್ಷೇಮಕ್ಕಾಗಿ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೋಳಿಸಿರುವ ಗ್ರಾಮ ಪಂಚಾಯತಗಳಿಗೆ ನಮ್ಮ ತಾಲೂಕಿನ ಅರೋಗ್ಯ ಇಲಾಖೆಯ ಸಿಬ್ಬಂದಿಗಳ ಸಂಪೂರ್ಣವಾದ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ ಎಂದರು.