ಯಾದಗಿರಿ : ಇದೇ 2023ರ ಮಾರ್ಚ್ 31 ರಿಂದ 15ರ ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯೆ ಸಂಹಿತೆ 144ನೇ ಕಲಂ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ಆದೇಶ ಹೊರಡಿಸಿದ್ದಾರೆ.
ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ಗಂಟೆಯ ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಯಾದಗಿರಿ ಜಿಲ್ಲೆಯ ಯಾದಗಿರಿ ನಗರ ಮತ್ತು ಗುರುಮಿಠಕಲ್ ತಾಲೂಕಿನ 29 ಪರೀಕ್ಷಾ ಕೇಂದ್ರಗಳು, ಶಹಾಪೂರ ಮತ್ತು ವಡಗೇರಾ ತಾಲೂಕಿನ 21 ಪರೀಕ್ಷಾ ಕೇಂದ್ರಗಳು ಮತ್ತು ಸುರಪುರ ತಾಲೂಕಿನ 18 ಪರೀಕ್ಷಾ ಕೇಂದ್ರಗಳು ಒಟ್ಟು ಜಿಲ್ಲೆಯಲ್ಲಿ 68 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಈ ಪರೀಕ್ಷೆಯು ಸೂಸುತ್ರವಾಗಿ ನಡೆಸುವ ಹಿತದೃಷ್ಟಿಯಿಂದ ಪರೀಕ್ಷಾ ದಿನಗಳಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2.30ಗಂಟೆಯ ವರೆಗೆ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ ಇರುವ ಬೆರಳಚ್ಚು ಕೇಂದ್ರ ಝರಾಕ್ಸ್ ಮಳಿಗೆ ಹಾಗೂ ಪುಸ್ತಕದ ಮಳಿಗೆಗಳನ್ನು ಮುಚ್ಚಲು ಕೆಳಕಂಡAತೆ ಷರತ್ತಿಗೊಳಪಟ್ಟು ಆದೇಶಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿ ಎಸ್.ಟಿ.ಡಿ ಮೊಬೈಲ್ ಬ್ಲೂಟತ್ ಡಿವೈಸ್, ಡಿಜಿಟಲ್ ವಾಚ್, ಪೇಜರ್, ವೈರಲೆಸ್, ಜಿರಾಕ್ಸ್, ಟೈಪಿಂಗ್, ಪುಸ್ತಕ ಮಳಿಗೆಳು ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ನಿಗದಿಪಡಿಸಿದ ಅಧಿಕಾರಿಗಳನ್ನು, ಶಿಕ್ಷಕರನ್ನು ಹೊರತುಪಡಿಸಿ ಇನ್ನೂಳಿದವರಿಗೆ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವದನ್ನು ನಿಷೇಧಿಸಲಾಗಿದೆ. 200 ಮೀಟರ್ ಪರೀಕ್ಷಾ ಕೇಂದ್ರದ ಸುತ್ತಲೂ ಜನರು ಮಾರಕಾಸ್ತçಗಳನ್ನು ಹಿಡಿದು ತಿರುಗಾಡುವದನ್ನು ನಿಷೇಧಿಸಿದೆ. ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಲಿಂಗೇರಿ ಕೋನಪ್ಪ ಆರ್.ನಾಡಗೌಡ ಸ್ಮಾರಕ ಪ್ರೌಢ ಶಾಲೆ, ಯಾದಗಿರಿ ಪರೀಕ್ಷಾ ಕೇಂದ್ರ ಭಾಗ್ಯಲಕ್ಷಿö್ಮÃ ಚಿತ್ತಮಂದಿರಕ್ಕೆ ಹೊಂದಿ 2023ರ ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.45 ಗಂಟೆಯ ವರೆಗೆ ಯಾವುದೇ ಚಲನ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಲಾಗಿದೆ.