ಯಾದಗಿರಿ ಜಿಲ್ಲೆಯ ವಡಗೆರಾ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ನಾಮಫಲಕ್ಕೆ ಹಾರ ಹಾಕಿ ನಮನ ಸಲ್ಲಿಸಿ ಜಯಂತೋತ್ಸವ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ನಾಗರತ್ನ ವಿ ಪಾಟೀಲ್ ಅಂಬೇಡ್ಕರ್ ಅವರನ್ನು ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ ಈ ದೇಶದಲ್ಲಿ ಶೋಷಿತ ಸಮಾಜ ಆಗಿರಬಹುದು ಮತ್ತು ಮಹಿಳೆಯರಾಗಿರಬದು ಕನಿಷ್ಠ ಮಾತನಾಡುವ ಸ್ವಾತಂತ್ರ್ಯ ಇರಲಿಲ್ಲ ಈ ದೇಶಕ್ಕೆ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ನಾವೆಲ್ಲರೂ ಸ್ವಾತಂತ್ರ್ಯದಿಂದ ಬದುಕುತ್ತಿದ್ದೇವೆ ಅಂಬೇಡ್ಕರ್ ರವರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು ನಂತರ ಮುಖ್ಯ ಭಾಷಣಕಾರರಾಗಿ ಮಾತನಾಡಿದ ನಾಗರಾಜ್ ಚಲವಾದಿ ಅಂಬೇಡ್ಕರರು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಾಕಷ್ಟು ಕಷ್ಟಪಟ್ಟು ಮತದಾನ ಕೊಟ್ಟಿದ್ದಾರೆ ಮತದಾನದ ಮೌಲ್ಯ ಮರೆತಿದ್ದೇವೆ ನಮ್ಮ ನಾಗರಿಕ ಹಕ್ಕುಗಳು ಮರೆತಿದ್ದೇವೆ ನಮ್ಮ ಹಕ್ಕುಗಳು ನಾವು ಕೇಳುವಂತರಾಗಬೇಕಿದೆ ಸಂವಿಧಾನ ರಕ್ಷಣೆ ಮಾಡುವವರನ್ನು ಸಾರ್ವಜನಿಕರಿಗೆ ಸ್ಪಂದಿಸುವಂತೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಪ್ರತಿಯೊಬ್ಬರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಪಾಲಕರು ಶಿಕ್ಷಣದ ಜೊತೆ ಸಂಸ್ಕಾರ ಕಲಿಸಬೇಕಿದೆ ಎಂದರು ಈ ಸಂದರ್ಭದಲ್ಲಿ ಹೊನ್ನಪ್ಪ ಭಂಡಾರಿ ಸ್ವಾಗತಿಸಿದರು ನಿಂಗಣ್ಣ ಕರಡಿ ನಿರೂಪಿಸಿದರು ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ್ ಸಾಹುಕಾರ್ ಶರಣ ಗೌಡ ಡಾ. ಶರೀಫ್ ಚಂದ್ರಶೇಖರ್ ಬಡಿಗೇರ್ ಭಾಷಾ ಸಾಬ್ ಹೈಯ್ಯಾಳಪ್ಪ ಮಾತಂಗಿ ದೇವಪ್ಪ ಅನಸೂರ ಬಸಪ್ಪ ಕೊಂಬಿನ ಭೀಮರಾಯ ದೊಡ್ಮನಿ ಹಾಗೂ ಗ್ರಾಮಸ್ಥರು ಮಹಿಳೆಯರು ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.