ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಿನ್ನೆ ನಡೆದಂತ ಜೆಡಿಎಸ್ ಪಕ್ಷದ ಬೃಹತ್ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿ ಬಿಜೆಪಿಯಿಂದ ಮತ್ತು ಕಾಂಗ್ರೆಸ್ ನಿಂದ ಉತ್ತರ ಭಾರತದ ಮುಖಂಡರ ದಂಡೇ ರಾಜ್ಯದಲ್ಲಿ ಬಂದು ಪಕ್ಷದ ಪರ ಕೆಲಸ ಮಾಡುತ್ತಿದ್ದರೆ ನಾನು ಏಕಾಂಗಿಯಾಗಿ ರಾಜ್ಯಾದ್ಯಂತ ಸುತ್ತಿ ಜೆಡಿಎಸ್ ಕಾರ್ಯಕರ್ತರ ಉಳಿಸಲು ರೈತರನ್ನು ಉಳಿಸಲು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡದೆ ಸ್ವಚ್ಛ ಆಡಳಿತ ನೀಡಿದ್ದು ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ 123 ಗುರಿಮುಟ್ಟಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಬಂದ ತಕ್ಷಣ ನಾನು ಕೈಗೊಂಡಂತ ಪಂಚರತ್ನ ಯೋಜನೆಯನ್ನು ಜಾರಿಗೊಳಿಸಿ,ರೈತರ ಆರೋಗ್ಯ ಮಕ್ಕಳ ಶಿಕ್ಷಣ ಉದ್ಯೋಗ ಅನೇಕ ಯೋಜನೆಗಳು ಜಾರಿಗೊಳಿಸಲು 2.5 ಕೋಟಿ ಹಣ ಸಂಗ್ರಹ ಮಾಡಿ ಅದನ್ನು ಜನರ ಅಭಿವೃದ್ಧಿಗೆ ಬಳಸಲಾಗುವುದು ಜನರಿಗೆ ಯಾವುದೇ ತೆರಿಗೆ ವಲಯಾಗದಂತೆ ಇಷ್ಟು ಕಾರ್ಯಕ್ರಮವನ್ನು ನಾನು ಜಾರಿಗೊಳಿಸುತ್ತೇನೆ ಎಂದು ತಿಳಿಸಿದರು ಎರಡು ರಾಷ್ಟ್ರೀಯ ಪಕ್ಷಗಳು ಜನ ತೆರಿಗೆ ಹಣವನ್ನು ಲೂಟಿ ಮಾಡಿ ಇವಾಗ ಚುನಾವಣೆ ಸಂದರ್ಭದಲ್ಲಿ ಹಣ ಹಂಚಿ ಮತವನ್ನು ಕೇಳಲು ನಿಮ್ಮ ಮುಂದೆ ಬರುತ್ತಿದ್ದಾರೆ ಆದರೆ ಎರಡು ಪಕ್ಷವನ್ನು ತಿರಸ್ಕರಿಸಿ ನಮ್ಮ ರೈತರ ಪಕ್ಷ ಆಗ ಕನ್ನಡ ನಾಡಿನ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಅಧಿಕಾರ ನೀಡಲು ಕಾರ್ಯಕರ್ತರು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು ಇಲ್ಲಿ ಕೆ ಮಾದೇವರು ಎರಡು ಬಾರಿ ಸೋತಿದ್ದರು ಮೂರನೇ ಬಾರಿ ಗೆದ್ದು ಕೋವಿಡ್ ನಂತಹ ಪರಿಸ್ಥಿತಿ ಇದ್ದರೂ ಹಳ್ಳಿಯಲ್ಲಿ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು ಶಕ್ತಿ ದೇವತೆ ನಾಡು ತಂಬಾಕಿನ ಈ ನೆಲದಲ್ಲಿ ಜೆಡಿಎಸ್ ಗೆಲುವು ಖಚಿತ ಇದು ಪ್ರತಿಯೊಬ್ಬ ಕಾರ್ಯಕರ್ತರ ಗೆಲುವೆ ಎಂದು ತಿಳಿಸಿದರು ಮಹದೇವ್ರವರು ಹಾಗೂ ಅವರ ಸುಪುತ್ರ ಪಿಎಮ್ ಪ್ರಸನ್ನ ರವರು ರೈತರಿಗಾಗಿ ಹಗಲಿರಲು ಶ್ರಮಿಸುತ್ತಿದ್ದಾರೆ ಇಲ್ಲಿ ಮೂವತ್ತು ವರ್ಷದಿಂದ ಅಧಿಕಾರ ಅನುಭವಿಸಿದಂತಹ ಶಾಸಕರು ಯಾವುದೇ ಒಂದು ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರದೇ ಇದ್ದರೂ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ತಿಳಿಸಿದರು ಮಾದೇವಣ್ಣ ರವರು ಮುಂದಿನ ಬಾರಿ ಗೆದ್ದ ನಂತರ ಸಿಡ್ಲು ಮಲ್ಲಿಕಾರ್ಜುನ ಬೆಟ್ಟ ಅಭಿವೃದ್ಧಿ ತಂಬಾಕಿಗೆ ಉತ್ತಮ ಬೆಲೆ ಉತ್ತಮ ಮಾರುಕಟ್ಟೆ ಮೆಕ್ಕೆಜೋಳ ಅಭಿವೃದ್ಧಿ ಹಾಗೂ ರೈತರ ಅಭಿವೃದ್ಧಿಗೋಸ್ಕರ ಮೈಮುಲಿನಿಂದ ಪ್ರಸನ್ನನವರು ಹಳ್ಳಿ ಹಳ್ಳಿಯಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಿ ರೈತರ ಬದುಕಿಗೆ ಹೆಚ್ಚು ಸಹಕಾರಿ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು ಶಾಸಕರಾದ ಮಾದೇವಣ್ಣನವರು ಮಾತನಾಡಿ ಹಣದ ಚೀಲ ಹಿಡಿದು ಮನೆ ಗಳಿಗೆ ಬರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು ವಿಲಾಸಗಳಿಗೆ ಯಾವುದೇ ಮತ್ತೆ ಅಧಿಕಾರ ನೀಡದೆ ಬಡವರ ರೈತರ ಏಳಿಗೆ ಕಾರಣವಾದಂತ ನಮ್ಮ ಪಕ್ಷಕ್ಕೆ ಹೆಚ್ಚು ಮತ ನೀಡಿ ಜಯಶೀಲರಾಗಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನರಸಿಂಹ ಎಂ ಬಿ ಸಿ ಸಿ ಬ್ಯಾಂಕ್ ನಿರ್ದೇಶಕ ಸಿ ಎನ್ ರವಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಅವರು ಪುರಸಭೆ ಅಧ್ಯಕ್ಷ ಕೆ ಮಾದೇವ್ ಟಿಎಪಿಎಂಸಿ ಅಧ್ಯಕ್ಷರಾದ ನಾಗೇಂದ್ರ ಜೆಡಿಎಸ್ ಕಾರ್ಯಾಧ್ಯಕ್ಷ ಅರಲ್ಮಣಿ ಮಹಿಳಾ ಜಿಲ್ಲಾಧ್ಯಕ್ಷರಾದ ಸವಿತಾ ಮಂಜುನಾಥ್ ಮಹಿಳಾಧ್ಯಕ್ಷೆ ಪ್ರೀತಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುನಾಥ್ ಜಯಕುಮಾರ್ ಚಂದ್ರೇಶ್ ಮುಖಂಡರಾದ ರಾಮು ಐಲಾಪುರ ಗೋವಿಂದೇಗೌಡರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.