ಕಾರಟಗಿ: ಸುಶಿಕ್ಷಿತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದು ಕರೆಯಲ್ಪಡುವ ಶಿವರಾಜ್ ತಂಗಡಗಿಯವರು ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಹೇಳಿದ್ದಾರೆ.
ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತೆ ಬಿಜೆಪಿ ಪಕ್ಷ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯನ್ನು ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಕವಡೆ ಕಾಸಿನ ಬೆಲೆ ಇಲ್ಲಾ, ಬಿಜೆಪಿಯ ಶಾಸಕರಿಗೆ ಹಾಗೂ ವರಿಷ್ಠರಿಗೆ ಅಭಿವೃದ್ಧಿ ಮತ್ತು ಜನಸೇವೆ ಬೇಕಾಗಿಲ್ಲಾ. ಏನಿದ್ದರು ಬರೀ ಅಧಿಕಾರದ ದಾಹ, ಹಣ ವ್ಯಾಮೋಹ ಮಾತ್ರ ಅವರಲ್ಲಿ ಇವೆ. ಕಳೆದ ಐದು ವರ್ಷಗಳ ಕಾಲ ಅಧಿಕಾರ ಪಡೆದು, ಹಣ ಮಾಡುವುದನ್ನು ಬಿಟ್ಟರೆ ಬಿಜೆಪಿಯವರು ಬೇರೆ ಏನು ಮಾಡಿಲ್ಲಾ. ಕನಕಗಿರಿ ಕ್ಷೇತ್ರದಾದ್ಯಂತ ಬಿಜೆಪಿಯವರು ಕಳೆದ ಐದು ವರ್ಷದಿಂದ ಬರೀ ದೌರ್ಜನ್ಯ ಅಕ್ರಮ ಮರಳು ದಂಧೆ, ಓಸಿ, ಇಸ್ಪೀಟ್ ಕ್ಲಬ್ ಸೇರಿದಂತೆ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿ, ಕೆಟ್ಟ ದಂಧೆಗಳಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಬಿಜೆಪಿಯವರ ಕಾಲಾವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.
ಇವೆಲ್ಲವನ್ನು ಮನಗಂಡಿರುವ ಅತ್ಯಂತ ಬುದ್ಧಿವತರು ಹಾಗೂ ಹೃದಯವಂತರಾದ ಕನಕಗಿರಿ ಕ್ಷೇತ್ರದ ಜನತೆಯು ಈ 2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶಿವರಾಜ್ ತಂಗಡಗಿಯವರನ್ನು ಅತ್ಯಂತ ದೊಡ್ಡ ಬಹುಮತದೊಂದಿಗೆ ಗೆಲ್ಲಿಸಲು ನಿರ್ಧಾರಿಸಿ, ಮತ ಚಲಾಯಿಸಿದ್ದಾರೆ.
ಹೀಗಾಗಿ ಕನಕಗಿರಿ ಕ್ಷೇತ್ರದಾದ್ಯಂತ ಹತ್ತು ವರ್ಷಗಳಲ್ಲಿ ಕೆರೆ ತುಂಬುವ ಯೋಜನೆ, ರೈಸ್ ಟೆಕ್ನಾಲಜಿ ಪಾಕ್೯, ಡಿಪ್ಲೋಮಾ ಕಾಲೇಜ್, ಕನಕಗಿರಿ ಮತ್ತು ಕಾರಟಗಿ ತಾಲೂಕು ರಚನೆ, ಬಡ ರೈತರ ಹೊಲಗಳಿಗೆ ಏತ ನೀರಾವರಿ ಯೋಜನೆಗಳು, ಸಿದ್ದಾಪುರದಲ್ಲಿ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ, ಕಲ್ಯಾಣ ಮಂಟಪ ಸೇರಿದಂತೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಇಡೀ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ, ಸುಶಿಕ್ಷತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುವ ಶಿವರಾಜ್ ತಂಗಡಿಗಿಯವರು ಸುಮಾರು 20ರಿಂದ 30 ಸಾವಿರ ಮತಗಳ ಅಂತರದಿಂದ ಗೆದ್ದು, ಇತಿಹಾಸ ನಿರ್ಮಿಸಲಿದ್ದಾರೆ.
ಇತಿಹಾಸ ನಿರ್ಮಿಸುವುದರೊಂದಿಗೆ ಗೆಲ್ಲುವ ಶಿವರಾಜ್ ತಂಗಡಗಿಯವರು, ಅವರ ಕನಸಿನಂತೆ ಮುಂದಿನ ದಿನಗಳಲ್ಲಿ ನವಲಿ ಬಳಿ 34 ಟಿ.ಎಮ್.ಸಿ ಸಾಮರ್ಥ್ಯ ದ ಸಮನಾಂತರ ಜಲಾಶಯ ಸೇರಿದಂತೆ ಇನ್ನಿತರ ಕಡೆ ಸಣ್ಣ-ಸಣ್ಣ ಸಮನಾಂತರ ಜಲಾಶಯಗಳು ನಿರ್ಮಿಸಿ, ಉದ್ಘಾಟನೆಗೊಳಿಸಲಿದ್ದಾರೆ.
ಸಿದ್ದಾಪುರ ಪಂಚಾಯಿತಿಯನ್ನು ಮೇಲ್ದರ್ಜಿಗೆ ಏರಿಸುವ ಮೂಲಕ ಪಟ್ಟಣ ಪಂಚಾಯತಿಯನ್ನಾಗಿ ಮಾಡುವುದು, ಕಾರಟಗಿ ನಗರದಲ್ಲಿ ಬೈ ಪಾಸ್ ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ಕನಕಗಿರಿ ಕ್ಷೇತ್ರದಾದ್ಯಂತ ಮತ್ತೆ ಅಭಿವೃದ್ಧಿ ಪರ್ವ ಪ್ರಾರಂಭವಾಗುವುದರ ಜೊತೆಗೆ ಜನರು ಶಾಂತಿ, ನೆಮ್ಮದಿಯಿಂದ ಜೀವನ ನೆಡೆಸುವಂತೆ ಮುಂಬರುವ ಶಿವರಾಜ್ ತಂಗಡಗಿಯವರ ಅಧಿಕಾರದ ಕಾಲಾವಧಿಯಲ್ಲಿ ನಿರ್ಮಾಣವಾಗಲಿದೆ ಎಂದು ಮಲ್ಲಿಕಾರ್ಜುನಗೌಡ ಹೊಸಮನಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಕರುನಾಡ ಕಂದ