ಯಾದಗಿರಿ: ಶಹಾಪುರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನ ಮುಗಿದ ನಂತರ ಇದೀಗ ನಗರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷದ ಕಾರ್ಯಕರ್ತರಿಂದ ಗೆಲುವು ಯಾರಿಗೆ ಸಿಗಲಿದೆ ಎಂದು ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಮೇ 10 ರಂದು ನಡೆದ ಮತದಾನ ಶೇ 66.66 ರಷ್ಟು ಮತದಾನವಾಗಿದ್ದು ಬಿಸಿಲು ಲೆಕ್ಕಿಸದೆ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವುದರ ಮೂಲಕ ಮೂರು ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಬಟನ್ ಒತ್ತುವುದರ ಮೂಲಕ ಮತ ಚಲಾಯಿಸಿದ್ದರು.
ಮೋಡ ಕವಿದ ವಾತಾವರಣ ಇದ್ದರೂ ಕೂಡಾ ಅಭಿಮಾನಿಗಳು ಮತದಾನಕ್ಕೆ ಬಂದು ಮತದಾನ ಮಾಡಿದರು ಚುನಾವಣೆ ಗೆಲುವಿಗಾಗಿ ತಮ್ಮದೇ ಆದ ಶೈಲಿಯಲ್ಲಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ನಮ್ಮ ಪಕ್ಷಕ್ಕೆ ಇಷ್ಟು ಮಾತುಗಳು ಬಂದಿವೆ ಮತೊಬ್ಬರ ಕಾರ್ಯಕರ್ತರಿಗೆ ಈ ರೀತಿ ಸೆಳೆದಿದ್ದಾರೆ ಗೆಲ್ಲಬಹುದು ಅಥವಾ ಇವರು ಈ ರೀತಿಯಾಗಿ ತಮ್ಮ ಮಾತುಗಳನ್ನು ಕಳೆದುಕೊಂಡಿದ್ದಾರೆ ಅದಕ್ಕಾಗಿ ಇವರಿಗೆ ಜಯ ಸಿಗುವುದಿಲ್ಲ ಎನ್ನುವ ಲೆಕ್ಕಾಚಾರ ಹಾಗೂ ಚರ್ಚೆಗಳು ಇದೀಗ ನಗರದಲ್ಲಿ ಎಲ್ಲೆಡೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಈ ಎಲ್ಲಾ ಲೆಕ್ಕಾಚಾರಕ್ಕೆ ಮೇ 13 ರಂದು ಉತ್ತರ ಸಿಗಲಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ