ರಾಯಚೂರು ಜಿಲ್ಲೆಯ ಸಿಂಧನೂರಿನ ಗಂಗಾವತಿ ರಸ್ತೆಯ ಹೊರಹೊಲಯದಲ್ಲಿ ಬರುವ ಹಳ್ಳದ ಹತ್ತಿರ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು ಮೂರ್ಛೆ ಬಂದು ಬಿದ್ದಿತ್ತು.ಅದನ್ನು ಕಂಡ ವನಸಿರಿ ತಂಡ ಅದನ್ನು ನಾಯಿನರಿಗಳಂತಹ ಕೆಲವು ಪ್ರಾಣಿಗಳು ತಿಂದು ಹಾಕುತ್ತವೆ ಎಂದು ತಿಳಿದು ಅದಕ್ಕೆ ನೀರು ಸಿಂಪಡಿಸಿ ಆಹಾರ ಮತ್ತು ನೀರು ಕುಡಿಸಿ ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸುವ ಮೂಲಕ ವನಸಿರಿ ತಂಡ ಮಾನವೀಯತೆ ಮೆರೆಯಿತು.
ಸಿಂಧನೂರಿನ ಗಂಗಾವತಿ ರಸ್ತೆಯ ಹೊರಹೊಲಯದಲ್ಲಿ ಬರುವ ಹಳ್ಳದ ಹತ್ತಿರ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು ಮೂರ್ಛೆ ಬಂದು ಬಿದ್ದಿತ್ತು. ಅದನ್ನು ನಾಯಿನರಿಗಳಂತಹ ಕೆಲವು ಪ್ರಾಣಿಗಳು ತಿಂದು ಹಾಕುತ್ತವೆ ಎಂದು ತಿಳಿದು ವೀರೇಶ ಸ್ವಾಮಿ ಎಂಬುವವರು ವನಸಿರಿ ಅಮರೇಗೌಡ ಮಲ್ಲಾಪೂರ ಅವರಿಗೆ ಕರೆ ಮಾಡಿ ನವಿಲಿನ ರಕ್ಷಣೆ ಮಾಡಲು ಕೋರಿದರು. ತಕ್ಷಣ ವನಸಿರಿ ಅಮರೇಗೌಡ ಅವರು ಸ್ಥಳಕ್ಕೆ ಧಾವಿಸಿ ನವಿಲನ್ನು ನೋಡಿ ತುಂಬಾ ಸಂತೋಷಗೊಂಡು ನವಿಲಿಗೆ ನೀರು ಸಿಂಪಡಿಸಿ ನೀರು ಕುಡಿಸಿ ಆಹಾರ ನೀಡಿದರು.ಇಂತಹ ಒಂದು ರಾಷ್ಟ್ರೀಯ ಪಕ್ಷಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರೀಕರ ಆದ್ಯ ಕರ್ತವ್ಯ ಎಂದು ತಿಳಿಸಿ ಇದನ್ನು ಪ್ರಾದೇಶಿಕ ಅರಣ್ಯ ವಲಯದ ನರ್ಸರಿಗೆ ಬಿಡೋಣ ಅಲ್ಲಿ ಇದನ್ನು ಯಾವ ಪ್ರಾಣಿಗಳ ಕಚ್ಚುವುದಿಲ್ಲ ಎಂದರು.ಇದಕ್ಕೆ ಸ್ಥಳದಲ್ಲಿ ಇದ್ದವರು ಒಪ್ಪಿಗೆ ಸೂಚಿಸಿದರು.ನಂತರ ಅದನ್ನು ಸಿಂಧನೂರಿನ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳಾದ ಶ್ರೀ ಮುನಿಸ್ವಾಮಿ ಅವರಿಗೆ ಒಪ್ಪಿಸಲಾಯಿತು.ನಂತರ ಅರಣ್ಯ ಅಧಿಕಾರಿಗಳು ಇಂತಹ ನವಿಲನ್ನು ಕಂಡು ರಕ್ಷಣೆ ಮಾಡಿದ ವನಸಿರಿ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು ನಮ್ಮ ನರ್ಸರಿಯಲ್ಲಿ ಬಿಡೋಣ ಇಲ್ಲಿ ನಾವು ನಮ್ಮ ಸಿಬ್ಬಂದಿಗಳು ಇದಕ್ಕೆ ಸರಿಯಾದ ಆಹಾರ ನೀರು ಒದಗಿಸಿ ರಕ್ಷಣೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ತಾಲೂಕ ಅಧ್ಯಕ್ಷರಾದ ರಮೇಶ ಕುನ್ನಟಗಿ,ಅರಣ್ಯ ಅಧಿಕಾರಿ ಮುನಿಸ್ವಾಮಿ,ಹಾಗೂ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.