ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀ ಧರ್ಮರಾಯ ಬಸಣ್ಣ ಖೈನೂರವರ ಅದ್ಭುತ ಸಾಧನೆ

ಕಲಬುರಗಿ/ಜೇವರ್ಗಿ:ಶ್ರೀ ಧರ್ಮರಾಯ ಬಸಣ್ಣ ಖೈನೂರವರ ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ1978 ರಲ್ಲಿ ಜನಿಸಿದ ಇವರು
ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆರೂಟಗಿಯ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ವಿಜಯಪುರ ಮತ್ತು ಪದವಿ ಶಿಕ್ಷಣವನ್ನು ಸಿಂದಗಿ ಹಾಗೂ ಬಿ.ಇಡಿ ಸ್ನಾತಕೋತ್ತರ ಪದವಿ 2000 ನೇ ಇಸ್ವಿಯಲ್ಲಿ JSS college of Education Vijayapur (ಜ್ಞಾನಯೊಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ)ದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.ಈ ಮಧ್ಯೆ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢಶಾಲೆ ಕಲಕೇರಿಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಆಂಗ್ಲ ಭಾಷೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು ಈ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಲು ಕಾರಣೀಕರ್ತರಾದ ಶ್ರೀ ಧರ್ಮರಾಯ ಶಿಕ್ಷಕರ ಹೆಸರನ್ನು ಇಂದಿಗೂ ಜ್ಞಾಪಿಸಿಕೊಳ್ಳುತ್ತಿದ್ದಾರೆ ನಂತರ ವಿಜಯಪುರ ನಗರದ ಹೆಸರಾಂತ ಸ್ಪರ್ಧಾತ್ಮಕ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿ ಹಲವಾರು ಸ್ಪರ್ಧಾ ಆಕಾಂಕ್ಷಿಗಳಿಗೆ ಇಂದಿಗೂ ದಾರಿ-ದೀಪವಾಗಿದ್ದಾರೆ.2005 ರಲ್ಲಿ ಕೆ.ಪಿ.ಎಸ್‌.ಸಿ ನಡೆಸುವ ಪರೀಕ್ಷೆ ಮೂಲಕ ಉತ್ತಮ ಅಂಕಗಳನ್ನು ಪಡೆಯುವದರ ಮುಖಾಂತರ ಕೃಷಿ ಇಲಾಖೆಯಲ್ಲಿ 2006 ನವ್ಹೆಂಬರ್ ತಿಂಗಳಲ್ಲಿ ತಮ್ಮ ಪ್ರ.ದ.ಸಾ ಹುದ್ದೆಯೊಂದಿಗೆ ಕೃಷಿ ಇಲಾಖೆ ಸೇಡಂನಲ್ಲಿ ಸರ್ಕಾರಿ ಸೇವೆಯನ್ನು ಆರಂಭಿಸಿ ಇಲ್ಲಿವರೆಗೂ ಸುಮಾರು ಹದಿನೇಳು(17)ವರ್ಷಗಳ ಕಾಲಘಟ್ಟದಲ್ಲಿ ಸ.ಕೃ.ನಿ ಸೇಡಂ ಕಛೇರಿ ಶಹಾಪೂರ ಸ.ಕೃ.ನಿ ಮತ್ತು ಸ.ಕೃ.ನಿ ಜಲಾನಯನ ಅಭಿವೃದ್ಧಿ ಇಲಾಖೆಯ ಯಾದಗಿರಿ ಮತ್ತು ಶಹಾಪೂರ ನಂತರ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಹುಮ್ನಾಬಾದ್ ಸರ್ಕಾರದ ಯೋಜನೆಗಳನ್ನು ಕಾರ್ಯೋನ್ಮುಖವಾಗಿ ಸಾರ್ವಜನಿಕರಿಗೆ ಅದ್ಭುತವಾಗಿ ಸೇವೆ ಸಲ್ಲಿಸಿ ಅತ್ಯುತ್ತುಮ ಅಧಿಕಾರಿಯಾಗಿ ಅಚ್ಚಳಿಯದೇ ಇನ್ನೂ ಸಾರ್ವಜನಿಕರ ಮನಸಿನ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದ್ದಿದ್ದಾರೆ.ಪ್ರಸ್ತುತ ಸುಮಾರು ಮೂರು ವರ್ಷಗಳಿಂದ ಸ.ಕೃ.ನಿ ಕಛೇರಿ ಜೇವರ್ಗಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಈ ಸೇವಾ ಅವಧಿಯಲ್ಲಿ 10 ವರ್ಷಗಳಿಂದ ಕಛೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಸುದೀರ್ಘ ಹದಿನೇಳು (17 )ವರ್ಷದ ಸೇವಾ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು ತಮ್ಮ 17 ವರ್ಷಗಳ ಸುದೀರ್ಘ ಕೃಷಿ ಇಲಾಖೆ ಸೇವೆಯಲ್ಲಿ ರೈತರೆ ದೇಶದ ಬೆನ್ನೆಲುಬು ಎನ್ನುವ ನಿಟ್ಟಿನಲ್ಲಿ ರೈತರಿಗಾಗಿ ಬಿಡುಗಡೆಯಾದ ಅನುದಾನವನ್ನ ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನ/ಪರಿಹಾರವನ್ನು ನಿಗಧಿತ ಅವಧಿಯೊಳಗೆ ತಲುಪಿಸುತ್ತಾ ಬರುತ್ತಿದ್ದಾರೆ.
2022ರ ತಾಲೂಕು ಮಟ್ಟದ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದಿರುವ ಇವರು ಅನೇಕ ಇಲಾಖೆ ಪರೀಕ್ಷೆಗಳನ್ನು ತೇರ್ಗಡೆಯಾಗಿದ್ದಾರೆ.ಉದಾಹರಣೆಗಾಗಿ ಸಬ್ಬಾರ್ಡಿನೇಟ್ ಅಕೌಂಟ್ ಸರ್ವಿಸ್ (ಎಸ್ಎಎಸ್),ನೊಂದಣಿ ಮತ್ತು ಮುದ್ರಾಂಕಗಳ ಇಲಾಖೆ ಪರೀಕ್ಷೆ ಕೃಷಿ ಇಲಾಖಾ ಪರೀಕ್ಷೆಗಳನ್ನು ತೆರ್ಗಡೆಯಾಗಿದ್ದಾರೆ.ಮುಂದುವರೆದು ಇವರು ಉತ್ತಮ ಆಡಳಿತಗಾರರಾಗಿ ಕಛೇರಿ ಜವಾಬ್ದಾರಿಯುತ ಅಧೀಕ್ಷಕರ ಸ್ಥಾನದಲ್ಲಿದ್ದುಕೊಂಡು ಉತ್ತಮವಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಯವರ ಕಡತಗಳ ಅಲ್ಲದೆ ಪ್ರತಿ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಅನುದಾನವು ಸಹ ರೈತ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದಾ ನಗು-ಮುಖದ ಸರಳ ವ್ಯಕ್ತಿತ್ವದ ಅಧಿಕಾರಿಗಳಾದ ಇವರು ಇತರೆ ಸಹದ್ದೋಗಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರು.ರೈತರು,
ಮುಖಂಡರು,ಜನಪ್ರತಿನಿಧಿಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಹಿರಿಯ ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಇವರು ಸುಮಾರು 10 ವರ್ಷಗಳಿಂದ ಅಧೀಕ್ಷಕ ಹುದ್ದೆಯಲ್ಲೇ ಇವರಿಗೆ ಮುಂದಿನ ದಿನಮಾನಗಳಲ್ಲಿ ಪದೋನ್ನತಿ ಮತ್ತು ಪ್ರಶಸ್ತಿಗಳು ಬರಲಿವೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೃಷಿ ಇಲಾಖೆ ಸದಸ್ಯರಾಗಿದ್ದು,ಶಹಾಪುರ ಮತ್ತು ಜೇವರ್ಗಿ ತಾಲೂಕಿನಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಸೇವೆ ಹೀಗೆ ಇನ್ನೂ ನಿರಂತರವಾಗಿ ಸಾಗಲಿ ಎಂದು ಕರುನಾಡ ಕಂದ ಆಶಿಸುತ್ತದೆ.

ವರದಿ:ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ