ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಅಥಣಿ ಶಾಸಕ ಲಕ್ಷ್ಮಣ ಸಂಗಪ್ಪ ಸವದಿಯವರದು ಸ್ವಾಭಿಮಾನದ ಗೆಲುವು ಎಂದರೇ ತಪ್ಪಾಗಲಾರದು. 2008 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸವದಿಯವರು ಯಡಿಯೂರಪ್ಪನವರ ಸಂಪುಟದಲ್ಲಿ ಸಹಕಾರ ಸಚಿವರರು ಕೂಡಾ ಆಗಿದ್ದರು. ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಹೇಶ್ ಕುಮ್ಟಳ್ಳಿ ಅವರ ಎದುರು ಪರಾಭವಗೊಂಡಿದ್ದರು ಸಹ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದು ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಇವರನ್ನು ಮಹಾರಾಷ್ಟ್ರದ ಚುನಾವಣೆ ಗೋಸ್ಕರ ಮತ್ತು 2019ರ ಮರುಚುನಾವಣೆಗೋಸ್ಕರ ಎಮ್ಎಲ್ಸಿ ಮಾಡಿ ಸಾರಿಗೆ ಸಚಿವರನ್ನಾಗಿ ಮಾಡಿ ಚುನಾವಣೆ ಮುಗಿದ ನಂತರ ಇವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದರು ಪಾಪ ಆ ವ್ಯಕ್ತಿ ಆವಾಗಲೂ ಪಕ್ಷದ ವಿರುದ್ಧ ಒಂದು ಮಾತನ್ನು ಕೂಡಾ ಆಡಲಿಲ್ಲ, ಮೊನ್ನೆ ನಡೆದ 2023ರ ಚುನಾವಣೆಯಲ್ಲಿ ಎಂಎಲ್ಎ ಟಿಕೆಟ್ ನೀಡದೆ ಆವಮಾನಿಸಿದಾಗ ತನ್ನ ಸ್ವಾಭಿಮಾನಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ಸನ್ನು ಸೇರಿದರು.ಬಿಜೆಪಿ ಅವರನ್ನು ಕೈಬಿಟ್ಟರು ಅಥಣಿ ಕ್ಷೇತ್ರದ ಮತದಾರರ ಅವರ ಕೈ ಬಿಡಲಿಲ್ಲ 75 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು.ಹಾಗಾಗಿ ಇದು ಸವದಿಯವರ ಗೆಲುವು ಮಾತ್ರ ಅಲ್ಲ ಇದು ಸ್ವಾಭಿಮಾನದ ಗೆಲುವು.
-ಶ್ರೀಶೈಲ್ ಪಾಟೀಲ್
ಪತ್ರಿಕೋದ್ಯಮ ವಿದ್ಯಾರ್ಥಿ
ಮೈಸೂರು ವಿಶ್ವವಿದ್ಯಾಲಯ