ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕಾರಟಗಿ ಮುಷ್ಟೂರು ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಹೊಸಪೇಟೆ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಅಭಿವೃದ್ಧಿ ಬ್ಯಾಂಕ್ ಗಂಗಾವತಿ ಆಶ್ರಯದಲ್ಲಿ ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ ಜರುಗಿತು. ಮೂಸ್ಟೂರ ಪ್ರಾ.ಕೃ.ಪ.ಸಂಘದ ಕಾರ್ಯಲಯದ ಆವರಣದಲ್ಲಿ ಶ್ರೀ ಶಿವಾಜಿ ನಾಯ್ಕರವರು ರೈತರನ್ನು ಉದ್ದೇಶಿಸಿ ಈಗ ಬ್ಯಾಂಕ್ ಗಳು ಜನ ಸ್ನೇಹಿ,ರೈತ ಸ್ನೇಹಿ ಉದ್ದೇಶಗಳಿಂದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತಿವೆ ಹಾಗಾಗಿ ನಮ್ಮ ದೇಶದ ಕೃಷಿ ಅಭಿವೃದ್ಧಿಗೆ ಎಸ್ ಬಿ ಐ ಬ್ಯಾಂಕ್ ಅನೇಕ ರೈತಪರ ಯೋಜನೆಗಳನ್ನು ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ ಎಂದು ಶ್ರೀ ಶಿವಾಜಿ ನಾಯಕ್ ರವರು ಮುಸ್ಟೂರ ಗ್ರಾಮದಲ್ಲಿ ರೈತ ಸಂಧ್ಯಾ ಶಿಬಿರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು ಪ್ರಾರಂಭದಲ್ಲಿ ರೈತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು
ಶ್ರೀ ಶಿವಾಜಿ ನಾಯ್ಕ ಚೀಫ್ ಮ್ಯಾನೇಜರ್ ಮುಂದುವರಿದು ಮಾತನಾಡುತ್ತಾ ಕೃಷಿ ಸಾಲಗಳ ಬಗ್ಗೆ ಮಾತನಾಡಿ 24 ಸಾವಿರಕ್ಕೂ ಹೆಚ್ಚು ಶಾಖೆಗಳು ಹೊಂದಿದ್ದು ಕೃಷಿಡೈರಿ,ಕುರಿ ಸಾಕಾಣಿಕೆ,ಟ್ರಾಕ್ಟರ್ ಸಾಲ,ಬೆಳೆಸಾಲ ಮತ್ತು ದೈನಂದಿನ ವ್ಯವಹಾರಗಳ ಮೆಲೆ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದು ರೈತರಿಗೆ ಮಾಹಿತಿ ನೀಡಿವುದರ ಮೂಲಕ ಅದರ ಸದುಪಯೋಗ ಪ್ರತಿಯೊಬ್ಬರು ಪಡೆದು ತಮ್ಮ ಆಧಾಯವನ್ನ ದ್ವೀಗುಣ ಮಾಡಿಕೊಳ್ಳಬೇಕೆಂದರು
ಬಿ.ಎಮ್ ಮಂಜುನಾಥ
ವ್ಯವಸ್ಥಾಪಕರು (ಎಡಿಬಿ) ಗಂಗಾವತಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜವಬ್ದಾರಿಯನ್ನು ನಿಬಾಯಿಸಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ನಾಲ್ಕು ಲಕ್ಷದಿಂದ ಇಪ್ಪತ್ತು ಲಕ್ಷದ ವರೆಗೆ ಸಾಲ ಸೌಲಭ್ಯ ಇದೆ.ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು
ಸ್ಟಾಂಪ್ ಇಂಡಿಯಾ ಯೋಜನೆ 10 ಲಕ್ಷದಿಂದ ಒಂದು ಕೋಟಿಯವರೆಗೆ ಎಸ್ ಸಿ,ಎಸ್ಟಿ, ಮತ್ತು ಮಹಿಳೆಯರು ಉಧ್ಯಮಿಗಳಾಗಬಹುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಖಾತೆ ಪ್ರಾರಂಭಿಸಿ ಅದರ ಸದುಪಯೋಗ ಪಡೆದುಕೊಂಡ ಶ್ರೀಮತಿ ತಿಪ್ಪಮ್ಮ ಮತ್ತು (ಪಿಎಂಜೆಜೆಬಿವೈ/ಎಸ್ ಬಿ ವೈ)ಲಕ್ಷ್ಮೀ ಇವರ ಗಂಡಂದಿರು ಅಪಘಾತದಲ್ಲಿ ಮರಣ ಹೊಂದಿದರು.ಈ ಸಂದರ್ಭದಲ್ಲಿ ಖಾತೆಯ ವಾರಸುದಾರರಿಗೆ ನಾಲ್ಕು ಲಕ್ಷ ರುಪಾಯಿ ವಿಮಾ ಸೌಲಭ್ಯವನ್ನು ಅವರಿಗೆ ದೊರಕಿಸಲಾಯಿತು
ಗಂಗಾವತಿ SBI ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ಟಿ.ಆಂಜನೇಯರವರು
ಸಾಮಾಜಿಕ ಭದ್ರತಾ ಯೋಜನೆಗಳಾದ PMJJBY,PMSBY ಅಟಲ್ ಪೆನ್ಷನ್ ಯೋಜನೆ ಹಾಗೂ ಅಫಘಾತ ಮತ್ತು ಸಾಮಾನ್ಯ ಮರಣ ಹೊಂದಿದಲ್ಲಿ ಕಡಿಮೆ ವಿಮೆಯಲ್ಲಿ ಹೆಚ್ಚಿನ ಭದ್ರತೆಯೊಂದಿರುವ ಭಾರತೀಯ ಸ್ಟೇಟ ಬ್ಯಾಂಕ್ ನೀಡುತ್ತಿರುವ ಸೋಸಿಯಲ್ ಸೆಕ್ಯೂರಿಟಿ ಸ್ಕೀಮ್ ಗಳ ಬಗ್ಗೆ ಪ್ರದಾನ ಮಂತ್ರಿ ಜೀವನ ಜ್ಯೋತಿ,ಪ್ರಧಾನ ಮಂತ್ರಿ ಜೀವನ ಸುರಕ್ಷ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಬಗ್ಗೆ ಮನ ಮುಟ್ಟುವಂತೆ ರೈತಬಾಂಧವರಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಡೇಶ ಜನಪದ ತಂಡ ಮನರಂಜನೆಯ ಕಾರ್ಯಕ್ರಮ ನಡೆಸಿಕೊಟ್ಟರು
ಕಾರ್ಯಕ್ರಮ ನಿರುಪಣೆಯನ್ನು ಶ್ರೀ ಸೋಮಶೇಖರ ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಅವರು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು
ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಕೇಳಿದ
ಪ್ರಶ್ನೆಗಳಿಗೆ ಸರಳವಾಗಿ ಬ್ಯಾಂಕಿನ ಮಾರ್ಗದರ್ಶನದಂತೆ ಉತ್ತರವನ್ನು ನೀಡಿದರು.
ಈ ಕಾರ್ಯಕ್ರಮದ ಸಾನ್ನಿಧ್ಯ ವನ್ನು ಮೂಸ್ಟೂರ ಗ್ರಾಮದ ಶ್ರೀ ಜಯದೇವ ಹಿರೇಮಠ ಸ್ವಾಮೀಜಿ ಯವರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ
ಶ್ರೀಮತಿ ಟಿ.ಹುಲಿಗೇಮ್ಮಪ್ರಾ.ಕೃ.ಪ.ಸ.ಅಧ್ಯಕ್ಷಿಣಿ,
ಶ್ರೀ ಸೋಮನಗೌಡ ಎಪಿಎಂಸಿ ಮಾಜಿ ಅದ್ಯಕ್ಷರು,ಶ್ರೀ ರಮೇಶ ವಡ್ಡರ ಮೂಸ್ಟೂರ ಗ್ರಾಂ.ಉಪಾದ್ಯಕ್ಷರು,SBI RBO ದ ಶ್ರೀ ಕುಳ್ಯಾಯಪ್ಪ,ಎಸ್ ಬಿ ಐ ಮುಷ್ಟುರು ವ್ಯವಸ್ಥಾಪಕರಾದ ಶ್ರೀನಿವಾಸ,SBI ADB ಯು ಹುಲ್ತಪ್ಪ,ನಾಗಾರ್ಜುನ ಮತ್ತು ಜಂಭಣ್ಣ ಮೂಸ್ಟೂರ,ಸಿಇಒ ಶರಣಪ್ಪ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮತ್ತು 300ಕ್ಕು ಅಧಿಕ ರೈತರು,ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು*
ರೈತರ ಸಂಧ್ಯಾ ಶಿಬಿರದಲ್ಲಿ ಬಳ್ಳಾರಿ ಜಾನಪದ ತಂಡ,ಸ್ಥಳೀಯ ಭಜಾನಾ ಮಂಡಳಿ,ಶಾಲಾ ಮಕ್ಕಳಿಂದ ಹಾಡು ‌ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 10 ಗಂಟೆಯವರೆಗೆ ನಡೆದವು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ