ರಾಯಚೂರು/ಸಿಂಧನೂರು:ಪರಿಸರವನ್ನು ನಾವು ಕಾಪಾಡಿದರೆ ಪರಿಸರವು ನಮ್ಮನ್ನು ಕಾಪಾಡುತ್ತದೆ.ಪರಿಸರವನ್ನು ಉಳಿಸಿ ಬೆಳೆಸುವುದು,ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ವಿನಾಯಕ ಗ್ರಾಮೀಣಾಭಿವೃದ್ಧಿ ಯುವಕ ಸಂಘದಿಂದ ಮಲ್ಲಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಪರಿಸರ ಪ್ರಶಸ್ತಿ ವಿಜೇತ ಅಮರೇಗೌಡ ಮಲ್ಲಾಪೂರ ಅವರು ಯುವಕರಿಗೆ ಸಲಹೆ ನೀಡಿದರು.
ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ 2023ನೇ ಸಾಲಿನ ಅರಣ್ಯ,ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ವತಿಯಿಂದ ನೀಡಲಾದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿರುವ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರನ್ನು ಮಲ್ಲಾಪೂರ ಗ್ರಾಮದ ವಿನಾಯಕ ಗ್ರಾಮೀಣ ಅಭಿವೃದ್ಧಿ ಯುವಕ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮರೇಗೌಡ ಮಲ್ಲಾಪೂರ ಈ ಪ್ರಶಸ್ತಿ ಪ್ರತಿಯೊಬ್ಬ ಪರಿಸರ ಪ್ರೇಮಿಗಳಿಗೆ ಸಲ್ಲಬೇಕಾಗಿದ್ದು,ನಿಮ್ಮ ಈ ಪ್ರೋತ್ಸಾಹದಿಂದ ನನಗೆ ಇನ್ನಷ್ಟು ಪರಿಸರ ಸೇವೆ ಮಾಡಲು ಉತ್ಸಾಹವಾಗುತ್ತಿದೆ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳ ಜೊತೆಗೆ ಸಮಯವನ್ನು ಬಿಡುವು ಮಾಡಿಕೊಂಡು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು,ರಾಜ್ಯವನ್ನು ಹಚ್ಚ ಹಸಿರು ಮಾಡಲು ಸಹಕರಿಸಬೇಕು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿದು ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಗ್ರಾಮದ ವಿನಾಯಕ ಗ್ರಾಮೀಣ ಅಭಿವೃದ್ಧಿ ಯುವಕ ಸಂಘದ ಸದಸ್ಯರು,ಊರಿನ ಹಿರಿಯರಿಗೆ,ಯುವಕರು ವನಸಿರಿ ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.