ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿಕ್ಕಹೇಸರೂರು ಗ್ರಾಮದಲ್ಲಿ ಸಾಯಂಕಾಲ ಮೊದಲು ಮುಂಗಾರು ಮಳೆ ಭರ್ಜರಿಯಾಗಿ ಸುರಿಯಿತು.
ವರ್ಷದ ಪ್ರಥಮ ವರ್ಷಧಾರೆ ತರುವ ಖುಷಿನೇ ಬೇರೆ. ಸಕಲ ಜೀವರಾಶಿಗಳಿಗೂ ಮೊದಲ ಮಳೆ ಇನ್ನಿಲ್ಲದ ಪುಳಕ,ಮೊದಲ ಮಳೆಗಾಗಿ ಅದೆಷ್ಟೋ ಜೀವ ಕಾಯ್ತಿದವೋ ಭಗವಂತನೇ ಬಲ್ಲ.ಆಕಾಶದ ಕಡೆ ನೋಡುತ್ತ ನಿಂತಿರುವ ಮರಗಿಡಗಳು,ಬಾಯಿ ತೆರೆದ ಭೂಮಿ,ಹನಿ ನೀರಿಗಾಗಿ ಎದರು ನೋಡ್ತಾ ಇರುವ ಒಣಗಿದ ಹುಲ್ಲು ಕಡ್ಡಿ,ನೆಲ್ಲಿಯ ಹನಿ ನೀರು ಕೂಡ ಬಿಸಿಯಿಂದ ಅಳುತ್ತಾ ಇದ್ದಂತೆ ಕಾಣುತಿತ್ತು.ಆದರೆ ರೈತರು ಮುಗಿಲ ಕಡೆನೇ ನೋಡುತ್ತಾ ದಿನವಿಡೀ ಸಮಯ ಕಳಿಯುತ್ತಿದ್ದರು. ರೈತರು ತಮ್ಮೆಲ್ಲ ಜಮೀನುಗಳನ್ನು ಸ್ವಚ್ಛ ಮಾಡಿ ಮುಂಗಾರು ಬಿತ್ತನೆಗೆ ತೊಗರಿ ಸಜ್ಜಿ,ಸೂರ್ಯಪಾನ ಬೀಜಗಳು,ಗೊಬ್ಬರ ತಯಾರು ಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತ ಇದ್ದರು ಚಿಕ್ಕಹೇಸರೂರು ಗ್ರಾಮ ದೇವತೆ ದುರ್ಗಾದೇವಿಗೆ ಉಡಿ ತುಂಬಿ ಮಳೆರಾಯನ ಆಗಮನದಲ್ಲಿದ್ದರು.
ದೇವರು ಕೊನೆಗೂ ಕಣ್ಣು ತೆಗೆದೇ ಬಿಟ್ಟ ಅಂತ ಕಾಣುತ್ತೆ ಇವತ್ತು ಸಾಯಂಕಾಲ ಸುರಿದ ಮಳೆಗೆ ರೈತರು ತುಂಬ ಖುಷಿಯಾಗಿದ್ದಾರೆ ರೈತರು ಇನ್ನೇನು ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ,ಕರುನಾಡ ಕಂದ ಪತ್ರಿಕೆ ಜೊತೆ ಮಾತನಾಡಿದ ರೈತರಾದ ಅಮರೇಗೌಡ ಮಾಲಿಪಾಟೀಲ ಹಾಗೂ ವಸಂತಕುಮಾರ ನಾಯಕ ಮಳೆಯಿಂದ ತುಂಬಾ ಸಂತಸ ತಂದಿದೆ ಒಂದು ಒಂದು ಹನಿ ಕೂಡ ‘ದೇವರು ಭೂಮಿಗೆ ಬಂದ ‘ಹಾಗೆ ಕಾಣುತ್ತೆ ಅಂತ ಸಂತಸ ವ್ಯಕ್ತಪಡಿಸಿ, ಮಳೆ ಬಂದು ನಿಂತ ಮೇಲೆ ಮಣ್ಣಿನಿಂದ ಬರುವ ಪರಿಮಳ ಯಾವ ಸುಗಂಧಕ್ಕೂ ಕಡಿಮೆ ಇಲ್ಲಾ ಅಂತ ಹೇಳಿದರು
ವರದಿ:ಪುನೀತ್ ಜೀ ಸಾಗರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.