ಹಾವೇರಿ:ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ.ಇದಕ್ಕೆ ನನಗೆ ಕೆಳಹಂತದಿಂದ ಸಹಕಾರ ಬೇಕಿದೆ,ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಪರಿಸ್ಥಿತಿ ಅರಿತು,ಜವಾಬ್ದಾರಿಯಿಂದ ನಡೆದುಕೊಂಡರೆ ಸಮಸ್ಯೆಗಳಿಗೆ ಪರಿಹಾರವೂ ಸುಲಭ ಸಾಧ್ಯ ಎಂದು ಶಾಸಕರಾದ ಮಾನೆ ಶ್ರೀನಿವಾಸ ಹೇಳಿದರು.
ಹಾನಗಲ್ ನಗರದ ರೋಶನಿ ಸಂಸ್ಥೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಮಾನವ ಹಕ್ಕುಗಳ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕನಾಗಿ ಜನರ ಭಾವನೆ ಅರಿತು ಸಮಸ್ಯೆ, ಸವಾಲುಗಳ ವಿರುದ್ಧ ಗಟ್ಟಿಯಾಗಿ ನಿಲ್ಲುವೆ. ನನ್ನೊಂದಿಗೆ ನೀವೆಲ್ಲ ಕೈ ಜೋಡಿಸಿ,ಸಮಯ ನೀಡಿ,ಸಹಕರಿಸಿದರೆ ಬದಲಾವಣೆ ಸಾಧ್ಯವಿದೆ.ಸುಳ್ಳು ಹೇಳುವುದು,ಸಮಯ ಹರಣ ಮಾಡುವುದು ನನ್ನ ಜಾಯಮಾನವಲ್ಲ ಜನ ಕೊಟ್ಟ ಅಧಿಕಾರವನ್ನು ಜವಾಬ್ದಾರಿಯಿಂದ ಚಲಾಯಿಸಿದಾಗ ಮಾತ್ರ ನನಗೂ ಸಮಾಧಾನ ಆಗುವುದು ಎಂದು ನುಡಿದರು.
ವರದಿ-ರವಿ ಓಲೆಕಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.