ಹನೂರು:ಪಟ್ಟಣದಲ್ಲಿ ಕೊಳ್ಳೇಗಾಲ ಮತ್ತು ಮೈಸೂರು ಕಡೆಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಬಸ್ ತಡೆದು ಪ್ರತಿಭಟನೆ ನಡೆಯಿತು ಶಕ್ತಿ ಯೋಜನೆಗೆ ಚಾಲನೆ ನೀಡಿ ಕೇವಲ ನಾಲ್ಕು ದಿನವೂ ಕಳೆದಿಲ್ಲ ಆಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ ಬಸ್ ಗಳು ಸಮರ್ಪಕವಾಗಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಹೀಗೆ ಆದರೆ ನಮ್ಮ ವಿದ್ಯಾಭ್ಯಾಸ ಏನಾಗಬೇಕು ತಡವಾಗಿ ಹೋದರೆ ಶಾಲಾ ಕಾಲೇಜು ಹಾಜರಾತಿ ಕೊರತೆ ಉಂಟಾದರೆ ನಮ್ಮ ಭವಿಷ್ಯ ಏನಾಗಬೇಕು ಎಂದು ವಿದ್ಯಾರ್ಥಿಗಳು ಸರ್ಕಾರಿ ಬಸ್ ತಡೆದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಅಡಿಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಸ್ಥಳೀಯ ಶಾಸಕರು ಸಮರ್ಪಕವಾಗಿ ಕ್ಷೆತ್ರದ ಎಲ್ಲಾ ಕಡೆಗೆ ಯಾವುದೇ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು.
ಹನೂರು ತಾಲೂಕು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ ಕ್ಷೆತ್ರದ ಶಾಸಕ ಮಂಜುನಾಥ್ ಯುವಕರ ಭವಿಷ್ಯದ ಬಗ್ಗೆ ವಿಶೇಷ ಚಿಂತನೆಯುಳ್ಳವರು ಕೂಡಲೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಹಾಗಾಗಿ ಶಾಸಕರು ಈ ವಿಚಾರವಾಗಿ ಸೂಕ್ತ ಕ್ರಮ ವಹಿಸಬೇಕೆಂದು ಸಾರ್ವಜನಿಕರು ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.
ವರದಿ:ಉಸ್ಮಾನ್ ಖಾನ್