ನೂತನ ರಾಜ್ಯ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಜಾರಿಯಾಗಿರುವ ಶಕ್ತಿ ಯೋಜನೆಯು ಸ್ವಾಗತಾರ್ಹವಾಗಿದೆ ಇಂತಹ ಯೋಜನೆಗಳಿಗಿಂತಲೂ ಅವಶ್ಯಕ,ಉಚಿತ ಯೋಜನೆ ಒಂದರ ಬಗ್ಗೆ ನಮ್ಮ ಘನ ಸರ್ಕಾರ ಗಮನಹರಿಸಬೇಕಿದೆ.
ಅದುವೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸೌಲಭ್ಯಗಳ ಪೂರೀಕರಣ,ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಕಲ್ಪಿಸಿ,ಉಚಿತ ಬಸ್ ಪಾಸ್ ಗಳ ವಿತರಣೆಯಾಗಬೇಕಿದೆ. ಇದರಿಂದ ಕರ್ನಾಟಕದ ಎಷ್ಟೋ ಹಳ್ಳಿಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪರದಾಡುವ ಸಮಸ್ಯೆ ಬಗೆಹರಿಯುವಂತದ್ದಾಗಿದೆ.
ವಿದ್ಯಾರ್ಥಿಗಳು ಮೂಲ ಸೌಲಭ್ಯಗಳ ಕೊರತೆಯಿಂದ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ ಆದ್ದರಿಂದ ಘನ ಸರ್ಕಾರವು ಈ ಎಲ್ಲಾ ಯೋಜನೆಗಳಿಗಿಂತಲೂ ಅತಿ ಅವಶ್ಯಕವಾಗಿರುವ ಯೋಜನೆಯಾದ ಭಾವಿ ಪ್ರಜೆಗಳ ಶಿಕ್ಷಣಕ್ಕೆ ಒತ್ತು ನೀಡಿ ಅವರ ಶ್ರಯೋಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ.) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.