ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನೀಟ್ ಹಾಗೂ ಅಗ್ರ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಸನ್ಮಾನ

ಬೀದರ:ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪಿ.ಯು.ಸಿ. ದ್ವಿತೀಯ ವರ್ಷ ಪರೀಕ್ಷೆಯಲ್ಲಿ ಶೇ. 95% ಕ್ಕೂ ಅಧಿಕ ಅಂಕ ಗಳಿಸಿದ 4 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನ್ನು ಕೊಡುಗೆಯಾಗಿ ನೀಡಲಾಯಿತು ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹರಾದ 10 ವಿದ್ಯಾರ್ಥಿಗಳಿಗೆ ಸನ್ಯಾನಿಸಲಾಯಿತು. ಅವರಲ್ಲಿ ಶಿವಾರೆಡ್ಡಿ ತಂದೆ ಗೋಪಾಲರೆಡ್ಡಿ ಆಲ್ ಇಂಡಿಯಾ ರ್ಯಂಕ 7800 ನಾಗೇಶ ತಂದೆ ಮಲ್ಲಕಾರ್ಜುನ ಅಲ್ ಇಂಡಿಯಾ ರ್ಯಂಕ್ 12000, ಸಹಾನಾ ತಂದೆ ಶಿವರಾಜ ಆಲ್ ಇಂಡಿಯಾ ರ್ಯಂಕ್ 15000,ಮನೀಷ್ ತಂದೆ ಶೇಷಪ್ಪಾ ಆಲ್ ಇಂಡಿಯಾ ರ್ಯಂಕ್ 8212,ಭಾಗ್ಯಶ್ರೀ ತಂದೆ ದಶರಥ,ಅಜಯ ತಂದೆ ರಮೇಶ,ಬಸವಾದಿತ್ಯ ತಂದೆ ಗಣಪತಿ,ವಿಶ್ವನಾಥ ತಂದೆ ಬಸವರಾಜ,ಪಲ್ಲವಿ ತಂದೆ ವಿಠಲ,ಅಶ್ವಿನಿ ತಂದೆ ಮಾಣಿಕ ಇವರೆಲ್ಲರು ನೀಟ್ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುತ್ತಾರೆ.
ಪ್ರಸಕ್ತ ಸಾಲನಲ್ಲಿ ಅಭಿಜಿತ ತಂದೆ ರವಿ 2022-23 ರ ಜೆ.ಇ.ಇ. ಮೆನ್ಸ್‌ನಲ್ಲಿ ಆಲ್ ಇಂಡಿಯಾ ರ್ಯಂಕ್ 306 ಪಡೆದು,ಎನ್.ಐ.ಟಿ, ಔರಂಗಾಬಾದನಲ್ಲಿ ಪ್ರವೇಶ ಪಡೆದಿರುತ್ತಾನೆ ಇಂದು ಆ ವಿದ್ಯಾರ್ಥಿಗೂ ಕೂಡ ಸನ್ಮಾನಿಸಲಾಯಿತು ಕಾಲೇಜಿನ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಜನಸೇವಾ ಶಾಲೆಯ ಆಡಳಿತಾಧಿಕಾಲಗಳಾದ ಶ್ರೀಮತಿ ಸೌಭಾಗ್ಯವತಿ ಜಲಾದೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ ಕಾಲೇಜಿನ ಉಪನ್ಯಾಸಕರಾದ ಮನೋಜಕುಮಾರ ಹಾಗೂ ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀನಿವಾಸ ಡಿ. ತಾಂದಳೆ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಗೋವಿಂದ ಡಿ. ತಾಂದಳೆ ಇವರು ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶೇ.95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಸಂಗಮೇಶ ತಂದೆ ರಾಜಕುಮಾರ ಶೇ.96% ರಷ್ಟು, ರಕ್ಷಿತಾ ತಂದೆ ಗಣಪತಿ ಶೇ.96% ರಷ್ಟು, ಶಿವಾರೆಡ್ಡಿ ತಂದೆ ಗೋಪಾಲರೆಡ್ಡಿ ಶೇ 95% ರಷ್ಟು, ಭಾಗ್ಯಶ್ರೀ ತಂದೆ ದಶರಥ ಶೇ. 95% ರಷ್ಟು ಇವರುಗಳನ್ನು ಲ್ಯಾಪ್‌ಟಾಪ್‌ ವಿತರಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿರಬೇಕು, ಶಿಸ್ತು, ಅನುಶಾಸನ ಪಾಲಿಸಿ,ಕಠಿಣ ಪರಿಶ್ರಮದಿಂದ ಓದಿದರೆ ತನ್ನ ಗುರಿ ಮುಟ್ಟಲು ಸಾಧ್ಯ ವಿಶೇಷವಾಗಿ ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರ ಇರಬೇಕು, ಇದರಿಂದ ವಿದ್ಯಾರ್ಥಿಗಳು ಏಕಾಗೃತೆ ಹಾಗೂ ಓದಿನ ಮೇಲೆ ಪರಿಣಾಮ ಬೀರುತ್ತದೆ ಹಾಗೂ ತಂದೆ-ತಾಯಿ ಯವರನ್ನು ಗೌರವಿಸಿ,ಅವರ ಕನಸನ್ನು
ನನಸಾಗಿಸಬೇಕೆಂದು ಜನಸೇವಾ ಶಾಲೆಯ ಆಡಳತಾಧಿಕಾರಿಯಾದ ಶ್ರೀಮತಿ ಸೌಭಾಗ್ಯವತಿ ಜಲಾದೆಯವರು ತಿಳಿಸಿದರು ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿದರೆ ತಮಗೆ ಬೇಕಾದುದನ್ನು ಸಾಧಿಸಬಹುದು,ಕಷ್ಟಪಟ್ಟು ಓದಿದರೆ ಮುಂದೆ ಹೋಗಿ ವೈದ್ಯರು, ಇಂಜಿನೀಯರ್,ವಿಜ್ಞಾನಿಗಳಾಗಿ ಸಮಾಜಕ್ಕೆ ಒಂದು ಒಳ್ಳೆಯ ಸೇವೆ ಮಾಡಬಹುದೆಂದು ಡಾ. ಬಿ.ಆರ್.ಅಂಬೇಡ್ಕರ ಕಾಲೇಜನ ಉಪನ್ಯಾಸಕರಾದ ಶ್ರೀ ಮನೋಜಕುಮಾರ ಅವರು ತಮ್ಮ ಹಿತನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಶ್ರೀ ಗೋವಿಂದ ಡಿ.ತಾಂದಳೆ ಮಾತನಾಡಿ,ಪ್ರಸಕ್ತ ವರ್ಷ ಕಾಲೇಜಿಗೆ ಶೇ. 99% ರಷ್ಟು ಫಲಿತಾಂಶ ಲಭಿಸಿದೆ,30 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ,ನೀಟ್ ಪರೀಕ್ಷೆಯಲ್ಲಿ, ವಿದ್ಯಾರ್ಥಿಗಳು ಪರಿಕ್ಷೆ ಬರೆದು,ಅದರಲ್ಲೂ ನಮ್ಮ ಕಾಲೇಜಿನ 10 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸಿಗೆ ಉತ್ತಮ ರ್ಯಂಕ್‌ ಪಡೆದು,ಅರ್ಹರಾಗಿದ್ದಾರೆ ಎಂದು ತಿಳಿಸಿದರು.ಪ್ರತಿ ವರ್ಷದಂತೆ ಈ ವರ್ಷ ಕೂಡಾ ಶೇ. 95% ಕ್ಕಿಂತ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳಿಗೆ 4 ಲ್ಯಾಪ್‌ಟಾಪ್‌ ನೀಡಿದ್ದೇವೆ,ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲ್ಯಾಪ್‌ಟಾಪ್ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಕಾಲೇಜಿಗೆ ಹಾಗೂ ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ,ಪಿ.ಯು.ಸಿ. ಎರಡು ವರ್ಷ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತ ಇಲ್ಲಿ ಕಷ್ಟಪಟ್ಟು ಓದ್ದು,ತನ್ನ ಜೀವನವನ್ನು ರೂಪಿಸಬಹುದೆಂದು ಹೇಳಿದರು.
ಪಿ.ಯು.ಸಿ.,ನೀಟ್,ಎನ್.ಐ.ಟಿ.,ಐ.ಐ.ಟಿ.,ಸಿ.ಇ.ಟಿ. ಪರಿಕ್ಷೆಗಳಲ್ಲಿ ಯಾವ ರಿತಿ ಸಿದ್ಧತೆ ಮಾಡಬೇಕೆಂದು ತಿಳಿಸಿದರು.ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಡಿ.ತಾಂದಳೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೇರೆಪಿಸಿದರು,ಕಾಲೇಜಿನ ಉಪನ್ಯಾಸಕರಾದ ಸಲಾಉದ್ದಿನ, ಬಿರೇಶ ಯಾತನೂ‌ರ,ಭೌತಶಾಸ್ತ್ರ ಉಪನ್ಯಸಕರಾದ ಆಸಿಫ್ ಅಲಿ,ಆಂಗ್ಲ ಉಪನ್ಯಾಸಕರಾದ ಸಾಗರ್ ಪಡಸಲೆ, ಗಣಿತ ಉಪನ್ಯಾಸಕರಾದ ಚಂದ್ರಕಾಂತ ಝಬಾಡೆ, ಭೌತಶಾಸ್ತ್ರ ಉಪನ್ಯಾಸಕರಾದ ಮಾಧವ ತಪಸಾಳೆ, ಜೀವಶಾಸ್ತ್ರ ಉಪನ್ಯಾಸಕರಾದ ಸಂತೋಷ ಗಿರಿ, ಗಣೇಶ ರೆಡ್ಡಿ,ಕು.ಏಂಜಲ್ ಅನುಷ,ಕು.ಅಶ್ವಿನಿ, ಉಪಸ್ಥಿತರಿದ್ದರು.ಇತರ
ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು ಹಾಗೂ ಜಿ. ಅನೀಲಕುಮಾರ ಜೀವಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂದನಾರ್ಪಣೆಯನ್ನು ರಸಾಯನಶಾಸ್ತ್ರ ಉಪನ್ಯಾಸಕರಾದ ಕು.ಪ್ರಾಜಕ್ತಾ ಇವರು ವಂದಿಸಿದರು.
ವರದಿ-ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ