ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ,ಪಾಲಬಾವಿ,ಸುಲ್ತಾನಪುರ, ಹಂದಿಗುoದ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ಜನ ರೈತ ಸಂಘದ ಮುಖಂಡರು ಮುಗಳಖೋಡ ಕ್ರಾಸ್ ಬಳಿ ಜತ್ತ- ಜಾoಬೊಟಿ ರಸ್ತೆಯನ್ನು ತಡೆಹಿಡಿದು ಟಾಯರ್‌ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಹಾರೂಗೇರಿಯ ಪೊಲೀಸ್ ಠಾಣಾಧಿಕಾರಿ ಗಿರಮಲೣಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ಪ್ರತಿಭಟನಾ ನಿರತ ರೈತರ ಮನವೊಲಿಸಲು ಪ್ರಯತ್ನಿಸಿದರು ಆದರೂ ಪಟ್ಟು ಬಿಡದ ರೈತರು ಪ್ರತಿಭಟನೆ ಹಿಂಪಡೆಯದೆ,ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು ಹಿಡಕಲ್ ಡ್ಯಾಂ ನಿಂದ ಜನಜಾನುವಾರುಗಳಿಗಾಗಿ ಬಿಡುಗಡೆ ಮಾಡಿರುವ ನೀರನ್ನು ಅಲ್ಲಲ್ಲಿ ನೀರೆತ್ತುವ ಯಂತ್ರಗಳ ಮೂಲಕ ಕಳುವು ಮಾಡುತ್ತಿರುವುದರಿಂದ ನೀರು ಸರಾಗವಾಗಿ ಹರಿದು ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದವು. ಪ್ರತಿಭಟನೆಯಲ್ಲಿ ನಾಲ್ಕೈದು ಹಳ್ಳಿಗಳ ರೈತ ಸಂಘದ ಮುಖಂಡರು,ರೈತರು ಭಾಗಿಯಾಗಿದ್ದರು.
ವರದಿ-ಉಮೇಶ್ ಯರಡತ್ತಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.