ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೌನೇಶ್ ರಾಠೋಡ್ ರವರ “ಮತ್ತೆ ಶುರುವಾಗಿದೆ” ಹೃದಯದ ಮಾತು ಎಂಬ ಆಲ್ಬಮ್ ಹಾಡು ಸದ್ಯದಲ್ಲೇ ತೆರೆಗೆ

ಗಂಗಾವತಿ :- ಕಲೆ ಯಾರೊಬ್ಬರ ಸ್ವತ್ತಲ್ಲ. ಅದಕ್ಕೆ ಯಾವ ಜಾತಿ ಧರ್ಮ ಬಡವ-ಬಲ್ಲಿದ ಎಂಬ ಭೇದ-ಭಾವಗಳಿಲ್ಲ. ಯಾರಲ್ಲಿ ಶ್ರದ್ಧೆ, ಕಲೆಯ ಮೇಲೆ ಪ್ರೀತಿ ಗೌರವ ಇರತ್ತೊ ಅವರು ಮಾತ್ರ ಸಾಧನೆ ಶಿಖಿರ ಏರಲು ಸಾಧ್ಯ. ಅಂತಹದ್ದೇ ಒಂದು ಹಳ್ಳಿ ಪ್ರತಿಭೆ ಮೌನೇಶ್ ರಾಠೋಡ್. ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾರಾಯಣನಗರ ಕ್ಯಾಂಪಿನ ನಾರಾಯಣಪ್ಪ ಮತ್ತು ಗಂಗಮ್ಮ ದಂಪತಿಗಳ ಕೂಸು ಈ ಮೌನೇಶ್ ರಾಠೋಡ್. ವಿದ್ಯಾರ್ಥಿಯಾಗಿದ್ದಾಗಲೆ ಬಣ್ಣದ ಲೋಕದಲ್ಲಿ  ಮಿನುಗುವ  ಕನಸುಗಳನ್ನು ಕಣ್ಣಾಲೆಗಳಲ್ಲಿ  ತುಂಬಿಕೊಂಡಿದ್ದರು ಮಾತನ್ನೆ ಬಂಗಾರವಾಗಿಸಿಕೊಂಡು ಖಾಸಗಿ ವಾಹಿನಿಗಳಲ್ಲಿ ನಿರೂಪಕನಾಗಿ ಹೆಸರು ಮಾಡಿ
ಕೆಲಸದ ಒತ್ತಡದ ನಡುವೆಯೂ ತಮ್ಮ ಸಿನಿಮಾ ಕ್ಷೇತ್ರದ ಮೇಲಿನ ಆಸಕ್ತಿಯನ್ನು ತೊರೆಯದೆ ಸತತ ಪ್ರಯತ್ನದ ಫಲವಾಗಿ ಪ್ರೀತಿ ಬೆಸೆದ ಕರೋನಾ ಎಂಬ ಮೊದಲ ಕಿರುಚಿತ್ರದ ಮೂಲಕ ಪರದೆ  ಮೇಲೆ ಕಾಣಿಸಿಕೊಂಡರು ಮುಂದೆ ಗೆಳೆಯರ ಜೊತೆಗೂಡಿ  ಕಿರುಚಿತ್ರ ಮಾಡಲು ಪ್ರಾರಂಭಿಸಿದರು.

ಒಂದು ಪ್ರೀತಿ ಎರಡು ಕನಸು ಕಿರುಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಯಮ ಧರ್ಮರಾಜ ಕಿರುಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಇವರ ನೈಜ ಅಭಿನಯ ಕಂಡು ಕಿರುತೆರೆಯಲ್ಲಿ ಮತ್ತಷ್ಟು ಸದಾವಕಾಶ ಒದಗಿಬಂದಿರುವುದು ಅವರ ಅಭಿನಯ ಚಾತುರ್ಯಕ್ಕೆ ಸಾಕ್ಷಿ ಯಾಗಿದೆ.
ಕಾದಂಬರಿ ಕಣಜ, ಅಳಗುಳಿಮನೆ, ರೋಬೊ ಫ್ಯಾಮಿಲಿ, ಸಿಲ್ಲಿ ಲಲ್ಲಿ ಧಾರಾವಾಹಿಗಳಲ್ಲಿ  ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಸಣ್ಣಪುಟ್ಟ ಅವಕಾಶಗಳಲ್ಲಿಯೇ ಅಭಿನಯ ಯಾನ ಮುಂದೆವರೆಸುತ್ತಾ,

ಇದೀಗ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ
ಆಲ್ಬಮ್ ಹಾಡಿನ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದು,ಈ ಆಲ್ಬಮ್ ಹಾಡನ್ನು ಈಗ ನಾಡಿನ ಜನತೆ ಮುಂದಿಡಲು  ನಿರ್ಧರಿಸಿದ್ದಾರೆ.

ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಕರಾವಳಿಯ ಕದ್ರಿ ಬೆಡಗಿ ಲಕ್ಷಿತ ಪೂಜಾರಿ ಇವರ ಜೊತೆಯಾಗಿ ಮೌನೇಶ್ ರಾಠೋಡ್ ನಾಯಕನಾಗಿ ಹೆಜ್ಜೆ ಹಾಕಿದ್ದಾರೆ.
ನಿರ್ದೇಶನ :- ಯಲಿಯೂರು ಪಿಳ್ಳೇಗೌಡ
ನಾಯಕ ನಟ :- ಮೌನೇಶ್ ರಾಠೋಡ್ ಮಸ್ಕಿ
ನಾಯಕಿ ನಟಿ :- ಲಕ್ಷಿತ ಪೂಜಾರಿ ಮಂಗಳೂರು
ಛಾಯಾಗ್ರಾಹಕ :- ಅಭಿಲಾಷ್ ಹಾಸನ
ಸಹಾಯಕ:-ಇಂದ್ರ್ ಜಿತ್ ಪವಾರ್ (ಮಸ್ಕಿ)
ಸಾಹಿತ್ಯ ಗಾಯಕ ಸಂಗೀತ ಹಣಮಂತು ಯಾದಗಿರಿ(ನಾರಾಯಣಪುರ)
ಸಂಕಲನ :- ಮೋಹನ್ ಬೆಂಗಳೂರು
ನೃತ್ಯ :- ಪ್ರದೀಪ್ ನಂದಿ (ವಿಜಯಪುರ). ಈ ಹಾಡು ಅತಿಶೀಘ್ರದಲ್ಲಿ ನಿಹಾರಿಕ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ. ನ್ಯಾಚುರಲ್ ಆಗಿ ಯೂಟ್ಯೂಬ್ ನಲ್ಲಿ ನಮ್ಮಯೋಗ್ಯತೆ ಏನಿದಿಯೋ ಅದಕ್ಕಿಂತ ಒಂದಿಷ್ಟು ಚೆನ್ನಾಗಿ ಇಲ್ಲಿ ಚಿತ್ರೀಕರಿಸಿದ್ದೇವೆ. ಕಲರಿಂಗ್,ಹಿನ್ನೆಲೆ ಸಂಗೀತ ನಟನೆ ಹೀಗೆ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ ಇದೀಗ ಅದನ್ನು ಜನರ ಮುಂದೆ ಇಡಲು ನಿರ್ಧರಿಸಿದ್ದೇವೆ ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ನೋಡಬೇಕು. ಈ ಹಾಡನ್ನು ಸಿನಿಮಾ ಫೀಲ್ ಅಲ್ಲೇ ತೆಗೆದುಕೊಂಡು ಹೋಗಿದ್ದೇವೆ, ನಮ್ಮ ಪ್ರಕಾರ ನಾವಿನ್ನು ಯಶಸ್ವಿ ಮುಟ್ಟಿಲ್ಲ ಯೂಟ್ಯೂಬ್ ನಲ್ಲಿ ಎಲ್ಲರ ಪ್ರೀತಿ ಗಳಸಿದ್ದೇವೆ ಇದೀಗ ಇನ್ನೊಂದು  ಹೊಸ ಹೆಜ್ಜೆ ಇಟ್ಟಿದ್ದೇವೆ . ಜನರು ಹೇಗೆ ನಮ್ಮನ್ನು ಸ್ವೀಕರಿಸ್ತಾರೆ  ನೋಡಬೇಕು. ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಹಾಡನ್ನು ನಾವು ಮಾಡಿಲ್ಲ ಇದು ಮನಸ್ಸಿನಿಂದ ಮಾಡಿದ ಕೆಲಸ. ಸ್ವಚ್ಛ ಮನಸ್ಸಿನಿಂದ ಗೆಲ್ಬೇಕು ಅಷ್ಟೇ,ಜನ ನಮ್ಮನ್ನು ಅದ್ಯಾವ ಮಟ್ಟಿಗೆ ತೆಗೆದುಕೊಂಡು ಹೋಗ್ತಾರೆ ಅನ್ನೋದು ಕಾದು ನೋಡಬೇಕಿದೆ ಎನ್ನುತ್ತಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ