ಮುಂಡಗೋಡ: ನಗರದಲ್ಲಿ ಕೆಲ ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರದಲ್ಲಿ ಮುಖ್ಯ ಸಿಲಿಂಡರ್ ಪೂರೈಕೆದಾರರು ಆದ HP ಗ್ಯಾಸ್ ನ ಕಂಪೆನಿಯು ಮುಂಡಗೋಡ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶೇಕಡಾ 85% ರಷ್ಟು ಪೂರೈಕೆ ಮಾಡುತ್ತಿದೆ.
ಡೀಲರ್ ಹೇಳುವುದೇನು:
ಮಂಗಳೂರಿನಲ್ಲಿ ವಿಪರೀತ ಮಳೆ ಆಗುತ್ತಿರುವ ಕಾರಣ ಧಾರವಾಡದ ಮುಖ್ಯ ಘಟಕಕ್ಕೆ ಗ್ಯಾಸ್ ಟ್ಯಾಂಕರ್ ಗಳು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಆದ ಕಾರಣ ಧಾರವಾಡ ದಿಂದ ಮುಂಡಗೋಡ ನಗರ ಕ್ಕೆ ಸಿಲಿಂಡರ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಮುಂಡಗೋಡ ಕ್ಕ್ ಎರಡು ದಿನಕ್ಕೆ 3 ಲೋಡ್ ಗಳು ನಗರಕ್ಕೆ ಬೇಕಿದೆ ಆದರೆ ಸದ್ಯ ಕಂಪೆನಿ ಇಂದ 2 ಲೋಡ್ ಗಳು ಮಾತ್ರ ಪೂರೈಕೆ ಆಗುತ್ತಿದೆ. ಈ ರೀತಿಯಾಗಿ ನಗರಕ್ಕೆ ಸಿಲಿಂಡರ್ ಅಭಾವ ಕಾಣುತ್ತಿದೆ ಎಂದು ಓಂ ಗ್ಯಾಸ್ ಏಜೆನ್ಸಿ ಮಾಲೀಕರಾದ ಬಸವರಾಜ್ ಓಶಿಮಠ ಅವರು ಕರುನಾಡ ಕಂದ ಪತ್ರಿಕೆಗೆ ಮಾಹಿತಿ ನೀಡಿ, ಸದ್ಯದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂದರು.