ಯಾದಗಿರಿ:ಹುಣಸಗಿ ತಾಲೂಕಿನ ಕೊಡೆಕಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲ್ಲಿಕೇರಿ ಗ್ರಾಮದ ಸರ್ಕಾರಿ ಗೈರಾಣು ಸರ್ವೇ ನಂಬರ್ 30 ರಲ್ಲಿ 3 ಎಕರೆ ಜಮೀನು ಮಲ್ಲಪ್ಪ ತಂದೆ ಹನುಮಪ್ಪ ಅವರಿಗೆ ಸೇರಿದ ಜಮೀನು ಸರ್ಕಾರದಿಂದ ಮಂಜೂರಾಗಿದ್ದು ಈ ಸದರಿ ಜಮೀನಿನಲ್ಲಿ ಅಕ್ರಮವಾಗಿ ಕಬ್ಜದಲ್ಲಿರುವವರನ್ನು ಬಿಡಿಸಿಕೊಡಲು ಆಗ್ರಹಿಸಿ ನಿನ್ನೆ ತಾಲೂಕ ದಂಡಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಈ ವಿಷಯಕ್ಕೆ ಸಂಬಂಧಿಸಿದಂತೆ,ಸುರಪುರ ಹಾಗೂ ಹುಣಸಗಿ ತಾಲೂಕ ವಾಲ್ಮೀಕಿ ನಾಯಕ ಸಂಘ ಹಾಗೂ ಹುಲ್ಲಿಕೇರಿ ಗ್ರಾಮದ ಪಟ್ಟೆದರಾದ ಮಲ್ಲಪ್ಪ ಹಾಗೂ ಸಮಾಜದ ಮುಖಂಡರು ಜೊತೆ ಸೇರಿ ಪ್ರತಿಭಟನೆಯ ಮೂಲಕ ದಂಡಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಹುಲಿಕೇರಿ ಗ್ರಾಮದ ಸರ್ವೇ ನಂಬರ್ 30 ಸರ್ಕಾರಿ ಗೈರಾಣು ಜಮೀನಿನಲ್ಲಿ ಸುಮಾರು 20 ವರ್ಷದ ಹಿಂದೆ ಮಲ್ಲಪ್ಪ ತಂದೆ ಹನುಮಪ್ಪ ಇವರಿಗೆ ಸರ್ಕಾರದಿಂದ ಜಮೀನು ಮಂಜೂರು ಆಗಿರುತ್ತದೆ.ಈ ಸರ್ವೇ ನಂಬರೈದಲ್ಲಿ ಬೇರೆಯವರು ಸಾಗುವಳಿ ಮಾಡಿ ಬೆಳೆಗಳನ್ನು ಬೆಳೆದಿರುತ್ತಾರೆ,ಮಲ್ಲಪ್ಪ ತಂದೆ ಹನುಮಪ್ಪ ಕಷ್ಟದ ದಿನ ಮಾನದಲ್ಲಿ ಹೊಟ್ಟೆ ಪಾಡಿಗಾಗಿ ಅವರು ದುಡಿಮೆಗಾಗಿ ನಗರಗಳಿಗೆ ವಲಸೆ ಹೋಗಿದ್ದರು ಈ ಸಂದರ್ಭವನ್ನು ನೋಡಿ ಅದೇ ಗ್ರಾಮದ ಬಸ್ಸಪ್ಪ ಮತ್ತು ಚಂದ್ರಪ್ಪ ಎನ್ನುವವರು ಮಂಜೂರಾತಿಯಾದ ಸರ್ವೇ ನಂಬರ್ 30 ರಲ್ಲಿ ಪಟ್ಟೆದಾರ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬೆಳೆಗಳನ್ನು ಬೆಳೆದಿದ್ದಾರೆ ನಂತರ ಮಲ್ಲಪ್ಪ ಅವರು ಬಂದು ನಮ್ಮ ಜಮೀನು ನಮಗೆ ಬಿಟ್ಟು ಕೊಡಿ,ಇದರಲ್ಲಿ ಏಕೆ ಬೆಳೆದಿದ್ದೀರಿ ಎಂದು ತಕರಾರು ಮಾಡಿದ್ದಾರೆ.ಆದರೆ ಅವರು ನಾವು ಕಬ್ಜದಲ್ಲಿ ಇದ್ದೇವೆ ಎಂದು ಹೇಳಿ ನಾವು ಸುಮಾರು ವರ್ಷಗಳಿಂದ ನಾವೇ ಸಾಗುವಳಿ ಮಾಡುತ್ತಾ ಬಂದಿದ್ದೇವೆ ನಾವು ಭೂಮಿ ಬಿಡುವುದಿಲ್ಲ ಎಂದು ಹೇಳಿ ಹೊಡೆಯಲು ಬಡಿಯಲು ಬಂದಿದ್ದಾರೆ. ಮತ್ತು ವಿವಿಧ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ನಮ್ಮ ಮೇಲೆ ವಿನಾಕಾರಣ ಅರ್ಜಿಗಳನ್ನು ನೀಡಿದ್ದಾರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ತಾಲೂಕ ದಂಡಾಧಿಕಾರಿಗಳ ಗಮನಕ್ಕೆ ತಂದಾಗ ಅವರು ಕೂಡ ನಮಗೆ ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ ಇದರಿಂದಾಗಿ ಮನನೊಂದು ನಾವುಗಳು ತಾಲೂಕ ದಂಡಾಧಿಕಾರಿ ಕಚೇರಿಗೆ ಭೂಮಿ ಸೆಕ್ಷನ್ ಗಳಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೇನೆ ದಯಮಾಡಿ ಮಲ್ಲಪ್ಪ ತಂದೆ ಹನುಮಪ್ಪ ಇವರಿಗೆ ಮಂಜೂರಿಯಾಗಿರುವ ಜಮೀನನ್ನು ಬೇರೆಯವರು ಅಕ್ರಮವಾಗಿ ಕಬ್ಜದಲ್ಲಿರುವ ಬಸ್ಸಪ್ಪ,ಚಂದಪ್ಪ ಇವರಿಗೆ ಸದರಿ ಜಮೀನಿನಿಂದ ತೆರವುಗೊಳಿಸಿ ಮೂಲ ಜಮೀನು ಮಾಲೀಕರಾದ ಮಲ್ಲಪ್ಪ ಇವರಿಗೆ ಜಮೀನನ್ನು ಬಿಡಿಸಿ ಕೊಡಬೇಕು ಎಂದು ಆಗ್ರಹಿಸುತ್ತೇವೆ ಅಕ್ರಮವಾಗಿ ಸರ್ವೆ ನಂಬರ 30 ರ ಪಟ್ಟೇದಾರ ಜಮೀನಿನಲ್ಲಿ ಕಬ್ಜದಲ್ಲಿರುವ ಬಸಪ್ಪ ತಂದೆ ಬಾಲಪ್ಪ ಹಾಗೂ ಚಂದ್ರಪ್ಪ ತಂದೆ ಬಾಲಪ್ಪ ಇವರು ಅದೇ ಗ್ರಾಮದ ಸರ್ವೆ ನಂಬರ್ 26 ರಲ್ಲಿ ಈಗಾಗಲೇ ಜಮೀನನ್ನು ಹೊಂದಿರುತ್ತಾರೆ ಮತ್ತು 28ರ ಎಂದು ಗ್ರಾಮಸ್ಥರು ಸರ್ವೇ ನಂಬರ್ ನಲ್ಲಿ ಕೂಡಾ ಇವರೇ ಪಟ್ಟೆದಾರರಾಗಿರುತ್ತಾರೆ.ಹೀಗಿರುವಾಗ ಜಮೀನು ಹೊಂದಿರುವ ಇವರಿಗೆ ಬೇರೆ ಜಮೀನನ್ನು ಹೇಗೆ ಮಂಜೂರಿ ಮಾಡುತ್ತೀರಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಅವರಿಗೆ ಜಮೀನು ಮಂಜೂರಿ ಮಾಡಿರುವುದು ತಪ್ಪಾಗಿರುತ್ತದೆ ಈ ವಿಷಯವು ತಮ್ಮ ಗಮನಕ್ಕೆ ತಂದರು ಸರ್ವೆ ನಂಬರ್ 30 ರಲ್ಲಿ ನಮಗೆ ಜಮೀನು ಮಂಜೂರಾತಿ ಮಾಡಿಕೊಡಬೇಕೆಂದು ಅರ್ಜಿ ಕೊಟ್ಟಿರುವುದು ಕಾನೂನು ವಿರೋಧವಾಗ ಆದ್ದರಿಂದ ಇಂದು ನಾವು ಹುಣಸಗಿ ತಾಲೂಕ ತಹಸಿಲ್ದಾರರ ಕಚೇರಿ ಮುಂದೆ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟವನ್ನು ಹಮ್ಮಿಕೊಂಡಿದ್ದೇವೆ.
ನಮ್ಮ ಮನವಿಗೆ ಸ್ಪಂದಿಸಿ ಕೊಡೆಕಲ್ಲು ಹೋಬಳಿಯ ಹುಲಿಕೇರಿ ಗ್ರಾಮದ ಸರ್ವೆ ನಂಬರ್ 30 ರಲ್ಲಿ ಸುಮಾರು ವರ್ಷಗಳ ಹಿಂದೆ ಶ್ರೀ ಮಲ್ಲಪ್ಪ ತಂದೆ ಹನುಮಪ್ಪ ಇವರಿಗೆ ಮೂರು ಎಕರೆ ಜಮೀನ ಮಂಜೂರಾತಿ ಆಗಿದ್ದು ತಕ್ಷಣ ಈ ಪಟ್ಟೆದಾರ ಜಮೀನಿನಲ್ಲಿ ಅತಿಕ್ರಮವಾಗಿ ಕಬ್ಜದಲ್ಲಿರುವ ಶ್ರೀ ಬಸಪ್ಪ ತಂದೆ ಬಾಲಪ್ಪ ಹಾಗೂ ಚಂದ್ರಪ್ಪ ತಂದೆ ಬಾಲಪ್ಪ ಇವರಿಗೆ ತಕ್ಷಣ ಸದರಿ ಜಮೀನಿನಿಂದ ತೆರವುಗೊಳಿಸಬೇಕು ಸರ್ಕಾರಿ ಭೂ ಕಬಳಿಕೆ ಆರೋಪದ ಅಡಿಯಲ್ಲಿ ಈ ಇಬ್ಬರ ಮೇಲೆ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು ಮತ್ತು ಪಹಣಿ ಯಾಗಿರುವ ಶ್ರೀ ಮಲ್ಲಪ್ಪ ತಂದೆ ಹನುಮಪ್ಪ ಇವರಿಗೆ ತಕ್ಷಣ ಜಮೀನು ಬಿಟ್ಟುಕೊಡಬೇಕು ಎಂದು ಈ ಪ್ರತಿಭಟನೆ ಮೂಲಕ ಆಗ್ರಹಿಸುತ್ತೇವೆ.
ನಮ್ಮ ಈ ಮನವಿಗೆ ಸ್ಪಂದಿಸದೆ ಹೋದರೆ ಪಟ್ಟದಾರ ಮಲ್ಲಪ್ಪ ಹಾಗೂ ಅವರ ಕುಟುಂಬ ಮತ್ತು ವಾಲ್ಮೀಕಿ ನಾಯಕ ಸಂಘಟನೆಗಳ ನೇತೃತ್ವದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಹಾಗೂ ಆಹೋ ರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಪ್ರತಿಭಟನಕಾರರು ಈ ಮೂಲಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ