ಚಾಮರಾಜನಗರ:ಕರ್ನಾಟಕ ರಾಜ್ಯದ ಉಚಿತಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಉಚಿತವಾಗಿ ನೋಂದಣಿ ಮಾಡುವಂತೆ ನಾಡಕಚೇರಿ ಬಾಪೂಜಿ ಸೇವಾ ಕೇಂದ್ರ ಕರ್ನಾಟಕವನ್ನು ಬೆಂಗಳೂರು ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ನೊಂದಾಯಿಸಲು ಆದೇಶ ಹೊರಡಿಸಿದ್ದು ಸರಿಯಷ್ಟೇ ಆದರೆ ತಮ್ಮ ಗಮನಕ್ಕೆ ತಿಳಿಸುವುದೇನೆಂದರೆ ಸರ್ಕಾರದ ಅಧೀನದಲ್ಲಿ ಬರುವಂತಹ ಎಲ್ಲಾ ಕೇಂದ್ರಗಳಲ್ಲೂ ಕಂಪ್ಯೂಟರ್ ಆಪರೇಟರ್ ಗಳ ಸಂಬಳ ವಿದ್ಯುತ್, ಪ್ರಿಂಟರ್ ಮತ್ತು ಪ್ರಿಂಟರ್ ಮತ್ತು ಕಂಪ್ಯೂಟರ್ ಗಳೆಲ್ಲ ಸರ್ಕಾರದಿಂದ ನೀಡುತ್ತಾರೆ ಆದರೆ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ನಾವೇ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಬೇಕಾಗುತ್ತದೆ ಆದ್ದರಿಂದ ನಾವು ಉಚಿತವಾಗಿ ನೋಂದಣಿ ಮಾಡಿದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಆದಕಾರಣ ನಾವು ಉಚಿತವಾಗಿ ನೋಂದಣಿ ಮಾಡಲು ಆಗುವುದಿಲ್ಲ ಇದರಿಂದ ಸಾರ್ವಜನಿಕ ತೊಂದರೆಯಾಗುತ್ತದೆ ನಾವು ಅರ್ಜಿ ಸಲ್ಲಿಸಲು ಸೇವಾ ಶುಲ್ಕ ಪಡೆಯುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಗ್ರಾಮ ಮಾಲೀಕರ ತಂಡ ಮನವಿಯನ್ನು ಸಲ್ಲಿಸಿ ಪ್ರತಿಭಟಿಸಿದರು.
ವರದಿ:ಉಸ್ಮಾನ್ ಖಾನ್