ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಂಘಸಂಸ್ಥೆಗಳಿಗೆ ವಿವಿಧ ಯೋಜನೆಗಳಲ್ಲಿ ನೀಡಲಾಗುವ ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಿದ ಸರಕಾರಕ್ಕೆ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಮೂಲಕ ನೀಡಲಾಗುತ್ತಿದ್ದ ಸಸಿಗಳ ಮೇಲಿನ ದರವನ್ನು ಹೆಚ್ಚುಗೊಳಿಸಲಾಗಿತ್ತು ಇದನ್ನು ನಮ್ಮ ವನಸಿರಿ ಫೌಂಡೇಶನ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಸಾರ್ವಜನಕರು ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆಗೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು. ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಲು ಸಿಂಧನೂರಿನ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದ ಪರಿಸರ ಪ್ರೇಮಿಗಳ ನಿಯೋಗವೊಂದು ಶಾಸಕರಾದ ಹಂಪನಗೌಡ ಬಾದರ್ಲಿಯವರ ಸಮ್ಮುಖದಲ್ಲಿ ಮಾನ್ಯ ಅರಣ್ಯ ಜೈವಿಕ ಪರಿಸರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದು ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಲು ಮನವಿ ಮಾಡಲಾಗಿತ್ತು ಇದಕ್ಕೆ ಸಚಿವರಾದ ಈಶ್ವರ ಖಂಡ್ರೆ ಅವರು ಕೂಡ ಇದನ್ನು ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಭರವಸೆ ನೀಡಿದ್ದರು. ನಮ್ಮ ಮನವಿಗೆ ಸ್ಪಂದಿಸಿ ಇದೀಗ ಕರ್ನಾಟಕ ಸರ್ಕಾರ ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಿ ಪರಿಷ್ಕೃತ ದರವನ್ನು ನಿಗದಿ ಮಾಡಿದೆ.1 ರೂ ನಿಂದ 3ರೂ ಗೆ,3ರೂ ನಿಂದ 6 ರೂ ಗೆ ಹಾಗೂ 6ನಿಂದ 23 ರೂಪಾಯಿಯವರೆಗೆ ಸಸಿಗಳ ದರವನ್ನು ಹೆಚ್ಚಿಗೆ ಮಾಡಲಾಗಿದ್ದ ದರ ಸದ್ಯ ಇದೀಗ ಪರಿಷ್ಕರಿಸಿ 3ರೂ ನಿಂದ 2ರೂ ಗೆ,6 ರೂ ನಿಂದ 3ರೂ ಗೆ ಹಾಗೂ 23ರೂ ನಿಂದ 6 ಗೆ ಇಳಿಸಿ ಕರ್ನಾಟಕ ಸರ್ಕಾರ ಪರಿಷ್ಕೃತ ದರವನ್ನು ಆದೇಶಿಸಿದೆ ಇದು ವನಸಿರಿ ಫೌಂಡೇಶನ್ ಹೋರಾಟಕ್ಕೆ ಸಂದ ಜಯ ಅಂತ ಹೇಳಬಹುದು ಮತ್ತು ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಿರುವುದು ಎಲ್ಲ ಪರಿಸರ ಪ್ರೇಮಿಗಳಿಗೆ, ಸಾರ್ವಜನಿಕರಿಗೆ, ಸಂಘಸಂಸ್ಥೆಗಳಿಗೆ ತುಂಬಾ ಸಂತೋಷದಾಯಕವಾಗಿದೆ. ಸಸಿಗಳ ಮೇಲಿನ ದರವನ್ನು ತಮ್ಮ ಪತ್ರಿಕೆಗಳ ಮೂಲಕ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆಯಲು ಸಹಕಾರಿಗಳಾದ ಎಲ್ಲ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು ಮತ್ತು ಈ ಸಸಿಗಳ ಮೇಲಿನ ದರವನ್ನು ಕಡಿಮೆಗೊಳಿಸಿದ ಸರ್ಕಾರಕ್ಕೆ,ಅರಣ್ಯ ಜೈವಿಕ ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಹಾಗೂ ಸಿಂಧನೂರಿನ ಶಾಸಕರಾದ ಹಂಪನಗೌಡ ಬಾದರ್ಲಿ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ತಮ್ಮ ಕಾರ್ಯಾಲಯದಲ್ಲಿ ತಿಳಿಸಿದರು.