ಔರಾದ:ತಾಲ್ಲೂಕಿನ ವನಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕೈತೋಟ ಬೆಳೆಸುವ ಪ್ರಾತ್ಯಕ್ಷಿಕೆ ನಡೆಯಿತು.
ಸಮುದಾಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡ ಅವರು ಕೈತೋಟ ಬೆಳೆಸುವ ವಿಧಾನ ಹೇಳಿಕೊಟ್ಟರು. 14 ಬಗೆಯ ತರಕಾರಿ, ಬಿಸಿಯೂಟಕ್ಕೆ ಬೇಕಾಗುವ ತರಕಾರಿ, ಶಾಲಾ ಆವರಣದಲ್ಲಿ ಬೆಳೆಸುವ ವಿಧಾನ ಹೇಳಿಕೊಟ್ಟರು. ಪಪ್ಪಾಯಿ ಹಾಗೂ ಬಾಳೆ ಹಣ್ಣು ಸುಲಭವಾಗಿ ಬೆಳೆಯಲು ಅವಕಾಶವಿದೆ ಎಂದು ಮಲ್ಲಪ್ಪ ಗೌಡ ಅವರು
ವಿವರಿಸಿದರು.
ಶಿಕ್ಷಕರು ಮನಸ್ಸು ಮಾಡಿದರೆ ವಾರದ ಆರು ದಿನ ಮಕ್ಕಳಿಗೆ ಬಗೆ ಬಗೆಯ ಪ್ರಕಾರದ ತರಕಾರಿ ಊಟ ಮಾಡಿಸಬಹುದೆಂದು ಮುಖ್ಯ ಶಿಕ್ಷಕ ಮಾಧವರಾವ ಭಾಲೆಕರ್ ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ನಾಗನಾಥ ಮೊರ್ಗೆ ಶಿಕ್ಷಕಿ ಜೈಶ್ರೀ ಡೊಂಬಾಳೆ, ವೆಂಕಟ ಭಾಲ್ಕೆ, ದಿಗಂಬರ ಪಾಂಚಾಳ, ರುಕ್ಕಿಣಿಬಾಯಿ, ಮಹೇಶ ಪೂಜಾರಿ, ಮಹಬೂಬ್ ಪಟೇಲ್, ಮಮತಾ, ವಿದ್ಯಾ ವತಿ, ಶಾಲಾ ಸಮಿತಿ ಅಧ್ಯಕ್ಷ ಸಂಜು ಬಿರಾದಾರ, ಸೋಪಾನರಾವ ಇದ್ದರು..
ವರದಿ:ಅಮರ ಮುಕ್ತೆದಾರ