ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಂಗಳೂರು ನಿರ್ಮಾತೃ ಕೆಂಪೇಗೌಡರ 514 ನೇ ಜಯಂತೋತ್ಸವ

ಹನೂರು:ತಾಲ್ಲೂಕು ಕೆಂದ್ರ ಬಿಂದುವಾದ ಹನೂರು ಪಟ್ಟಣದ ಒಕ್ಕಲಿಗ ಜನಾಂಗ ಸಂಘಗಳು ಹಾಗೂ ಯುವ ಸಮಿತಿಯವರುಗಳ ಸಹಯೋಗದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಪಟ್ಟಣದಲ್ಲಿನ ಆರ್.ಎಮ್.ಸಿ ಆವರಣದಲ್ಲಿ ಚಾಲನೆ ನೀಡುವುದರ ಮೂಲಕ ಮೆರೆವಣಿಗೆಯನ್ನು ಮಾಡಿಕೊಂಡು ವಿಜೃಂಭಣೆಯಿಂದ ಆಚರಿಸಲಾಯಿತು.
ಹನೂರು ಪಟ್ಟಣದ ಆರ್.ಎಂ.ಸಿ.ಆವರಣದಲ್ಲಿ ಮೈಸೂರು ವಿಜಯನಗರ ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿಗಳು ಆರ್ಶಿವಚನ ನೀಡುವ ಮೂಲಕ ಮಾಜಿ ಶಾಸಕ ಆರ್.ನರೇಂದ್ರ, ಮಾನಸ ಫೌಂಡೇಷನ್ ಅಧ್ಯಕ್ಷ ಡಾ.ದತ್ತೇಶ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಗಂಗಾಧರ್,ಡಿವೈಎಸ್ ಪಿ ಸೋಮೆಗೌಡ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್,ಬ್ಯಾಂಕ್ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್,ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಕೆಂಪೇಗೌಡರ ಪ್ರತಿಮೆ ಭಾವಚಿತ್ರ ಸಹಿತ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಅವರು ಸರ್ವರ ಒಳಿತನ್ನು ಬಯಸುವ ಹಿತದೃಷ್ಟಿ ಹಾಗೂ ದೂರದೃಷ್ಟಿಯನ್ನು ಹೊಂದಿದ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ ಅಲ್ಲದೆ ಕೆರೆ ಕಟ್ಟೆಗಳು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಅಂದಿನ ಕಾಲದಲ್ಲಿನ ಅವರ ದೂರದೃಷ್ಟಿ ಇಂದು ಬೆಂಗಳೂರು ಬೃಹತ್ ಮಟ್ಟದಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಬೆಳೆದು ಹೆಸರು ಗಳಿಸುವಲ್ಲಿ ಕಾರಣವಾಗಿದೆ ನಮ್ಮ ನಾಡಿಗೆ ಅಂತ ಮಹಾನ್ ವ್ಯಕ್ತಿಗಳ ಕೊಡುಗೆ ಅಪಾರ ಆದ್ದರಿಂದ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದರ ಮುಖಾಂತರ ಸಮಾಜಕ್ಕೆ ಸೇವೆ ನೀಡಬೇಕು ಎಂದು ಎಲ್ಲಾರಿಗೂ ಸಲಹೆ ನೀಡಿದರು .
ಕೆಂಪೇಗೌಡರ ಪ್ರತಿಮೆಯ
ವೈಭವದ ಮೆರವಣಿಗೆ:ಆರ್ ಎಮ್ ಸಿ ಯಿಂದ ಪ್ರಾರಂಭಿಸಿದ ಕೆಂಪೇಗೌಡರ ಭಾವಚಿತ್ರವಿರುವ ತೇರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿ ವಾದ್ಯಮೇಳಗಳು ನಗಾರಿ ತಮಟೆ ಹಾಗೂ ಕಲಾ ಮೇಳದೊಂದಿಗೆ ನೆರೆದಿದ್ದ ಜನರು ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆ,ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಪಟ್ಟಣದ ಬಸ್ ನಿಲ್ದಾಣದ ಮೂಲಕ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದ ಬಳಿ ಬಂದು ಮೆರವಣಿಗೆ ಮುಕ್ತಾಯವಾಯಿತು.

ಗಮನ ಸೆಳೆದ ಯುವಕರಕುಣಿತ:
ಮೆರವಣಿಗೆಯುದ್ದಕ್ಕೂ ಯುವಕರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.ನೃತ್ಯ ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ತಂದಿತು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಸಂತೋಷ ಪಟ್ಟರು.
ಇದೇ ಸಂದರ್ಭದಲ್ಲಿ ಪ.ಪಂ.ಸದಸ್ಯರುಗಳಾದ ಗಿರೀಶ್ ಕುಮಾರ್,ಆನಂದ್ ಕುಮಾರ್,ಹರೀಶ್,ಮುಖಂಡರುಗಳಾದ ನಟರಾಜು,ಮಾದೇಶ್,ರವಿಗೌಡ್ರು,ರಾಜೂಗೌಡರು,ವೆಂಕಟೇಶ್,ಸೇರಿದಂತೆ ಕೊಳ್ಳೆಗಾಲ ಮತ್ತು ಯಳಂದೂರು ತಾಲ್ಲೋಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಜುಗೌಡ ನಿರ್ದೇಶಕರುಗಳಾದ ಚಿಕ್ಕತಿಮ್ಮೆಗೌಡ,ಮಂಜು,ಬಸವರಾಜು,ಯುವ ಮುಖಂಡರಾದ ನಟರಾಜು,ಪ್ರತಾಪ್,ಶಶಿಕುಮಾರ್ ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ