ನಿಡಗುಂದಿ:ಪಟ್ಟಣದ ಬಿ ಎಂ ಎಸ್ ಶಾಲೆಯ ಆವರಣದಲ್ಲಿ ಶಾಲಾ ಸಂಸ್ಥೆಯ ಸಂಸ್ಥಾಪಕರಾದ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಸೋಮಶೇಖರ ನಾಗರಬೆಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಚೆಸ್ ದಿನಾಚರಣೆಯನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ,ಈ ಆಟದಿಂದ ನಾವು ಮಾನಸಿಕ ಏಕಾಗ್ರತೆ ವೃದ್ಧಿಸಿಕೊಳ್ಳಬಹುದಾಗಿದೆ ಎಂದರು.ಈ ವೇಳೆ ಹಿರಿಯರಾದ ವಿಜಯಲಕ್ಷ್ಮಿ ನಾಗರಬೆಟ್ಟ,ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸೀಮಾ ನಾಗರಬೆಟ್ಟ, ಉಪನ್ಯಾಸಕರಾದ ಶಿಲ್ಪಾ ಶಾ,ಯಾಸೀನ್ ಮುಲ್ಲಾ ಸೇರಿದಂತೆ ಪೂರ್ವ ಪ್ರಾಥಮಿಕ,ಪ್ರಾಥಮಿಕ ಶಾಲೆ,ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಶಿಕ್ಷಕರು, ಶಿಕ್ಷಕಿಯರು,ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಶಿಕ್ಷಕಿ ಶೃದ್ಧಾ ಗುಪ್ತಾ,ಶಾಲೆಯ ದೈಹಿಕ ಶಿಕ್ಷಕರಾದ ಅಶೋಕ ಚಲವಾದಿ,ಸಂಗೀತ ಶಿಕ್ಷಕರಾದ ಮಲ್ಲು ಗದ್ದಿ,ಯೋಗ ಶಿಕ್ಷಕಿ ಶಂಕ್ರಮ್ಮ ಉದ್ದಂಡಿ, ಇಂಗ್ಲಿಷ್ ಶಿಕ್ಷಕ ಅಸ್ಲಂ ಶೇಖ್ ಕಾರ್ಯಕ್ರಮ ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.