ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಯತ್ನಾಳ ಅಭಿಮಾನಿ ಬಳಗ ಹಾಗೂ ದುನಿಯಾ ವಿಜಯ್ ಅಭಿಮಾನಿ ಬಳಗ ಸಂತೋಷದಿಂದ ಹರಕೆಯನ್ನು ತೀರಿಸಿದರು ಮೊನ್ನೆ ನಡೆದ ವಿಧಾನಸಭೆ ಗಲಾಟೆಯಲ್ಲಿ ಬಿಜೆಪಿ ಹತ್ತು ಜನ ಶಾಸಕರನ್ನು ಅಮಾನತ್ತು ಮಾಡಿತ್ತು,ಇದನ್ನು ತಿಳಿದ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿಗೆ ಮುಂದಾಗಿದ್ದರು. ಅಮಾನತ್ತು ಆದ ಬಿಜೆಪಿ ಹತ್ತು ಜನ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಹೊರ ಹಾಕುವ ಸಮಯದಲ್ಲಿ ನೂಕುನಗ್ಗಲು ಉಂಟಾದ ಸಂದರ್ಭದಲ್ಲಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇದನ್ನು ತಿಳಿದ ಕರ್ನಾಟಕದ ಕೋಟ್ಯಂತರ ಯತ್ನಾಳ್ ಅಭಿಮಾನಿ ಬಳಗ ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದರು ಮತ್ತು ದೇವರಿಗೆ ಹರಕೆಯನ್ನು ಕೂಡ ಬೇಡಿಕೊಂಡಿದ್ದರು ಈ ವಿಷಯ ತಿಳಿದು ಲಿಂಗಸುಗೂರಿನ ಯತ್ನಾಳ್ ಅಭಿಮಾನಿ ಬಳಗ ಹಾಗೂ ದುನಿಯಾ ವಿಜಯ್ ಸ್ನೇಹಿತರು ಬಸನಗೌಡ ಪಾಟೀಲ್ ಯತ್ನಾಳ್ ಆದಷ್ಟು ಬೇಗ ಗುಣಮುಖರಾದರೆ ಹೃದಯ ಭಾಗದಲ್ಲಿರುವ ಶ್ರೀ ಆಂಜನೇಯ ಸ್ವಾಮಿಗೆ 105 ತೆಂಗಿನಕಾಯಿ ಹೊಡೆಯುವುದಾಗಿ ಹರಕೆಯನ್ನು ಇಟ್ಟಿದ್ದರು ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದಾರೆ ತಾವು ಇಟ್ಟ ಹರಕೆ ದೇವರಿಗೆ ಕೇಳಿ ಫಲಿಸಿತು ಎನ್ನುವ ಸಂತೋಷದಿಂದ ಇವತ್ತು ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ 105 ತೆಂಗಿನಕಾಯಿ ಹೊಡೆಯುವ ಮೂಲಕ ತಮ್ಮ ಹರಕೆಯನ್ನು ಈಡೇರಿಸಿ ಆದಷ್ಟು ಬೇಗ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದರು ಹಾಗೂ ದುನಿಯಾ ವಿಜಯ್ ಮೇಟಿ ಅವರು ಶ್ರೀ ಆಂಜನೇಯ ಸ್ವಾಮಿಗೆ ಉಪವಾಸವಿದ್ದು ಹರಕೆಯನ್ನು ತೀರಿಸಿದ್ದಾರೆ ಅಂತ ಹೇಳಬಹುದು ಹರಕೆ ತೀರಿಸುವ ವೇಳೆ ಚಿಕ್ಕಮಕ್ಕಳಾದ ಭುವನ್ ಹಾಗೂ ಭರತ ಪುಟ್ಟ ಮಕ್ಕಳು ಕೂಡಾ ಪಾಲ್ಗೊಂಡು ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ದೇವರು ಶಕ್ತಿಯನ್ನು ನೀಡಿ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಪರಶುರಾಮ್ ಕೆಂಭಾವಿ ಬಿಜೆಪಿ ಮುಖಂಡರು,ಜೂಲಪ್ಪ ನಾಯಕ್ ಮಾಜಿ ಜಿಲ್ಲಾ ಪಂ ಮೆಂಬರ್,ಮಲ್ಲಿಕಾರ್ಜುನ ಹಟ್ಟಿ ಬಿಜೆಪಿ ಮುಖಂಡರು,ದುನಿಯಾ ವಿಜಯ್ ಮೇಟಿ, ಅಮರೇಶ್ ಹುನುಕುಂಟಿ,ಶಿವರಾಜ್ ಸಿಂಗ್,ವೀರೇಶ್ ಯರಡೋಣ,ರಮೇಶ್ ಚಾಪಲ್ ಲಿಂಗಸುಗೂರ,ಶ್ರೀಕಾಂತ್ ಪಲ್ಲೆದ್ ಹಾಗೂ ಕಿರಣ ಪಲ್ಲೆದ,ಮನು ಪಾಟೀಲ್ ಚಿಕ್ಕ ಹೆಸರೂರು,ರುದ್ರಣ್ಣ ಹೊನ್ನಳ್ಳಿ,ಭುವನ ಹಾಗೂ ಭರತ್ ಪಾಲ್ಗೊಂಡಿದ್ದರು
ವರದಿ:ಪುನೀತಕುಮಾರ್