ಎರಡೇ ತಿಂಗಳಲ್ಲಿ ಕಿತ್ತು ಹೋದ ₹9.29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಲಿಂದ ಒದ್ದರೆ ಕಿತ್ತು ಬರುತ್ತಿದೆ ಕಲ್ಲಿನ ಕಡಿ ಹಾಗೂ ಡಾಂಬಾರ್
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆರೇಗಲ್ ಹೋಬಳಿ ಹಾಲಕೆರೆ ಗ್ರಾಮದ ಹೊರಗಿನ ರಸ್ತೆಯನ್ನು ಅಂದಾಜು ₹9.29 ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 2022 ಜನವರಿ 1ರಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಪಡೆದು ಅಂದಾಜು ಎರಡು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಆದರೆ ಗುತ್ತಿಗೆದಾರರು ವಿಳಂಬ ಮಾಡುವುದರ ಜೊತೆಗೆ ಗರಚು ಹಾಗೂ ಕಲ್ಲಿನ ಕಡಿಗಳ ಮೇಲೆ ನೆಪ ಮಾತ್ರಕ್ಕೆ ಡಾಂಬರು ಹಾಕಿದ್ದಾರೆ ಸಂಪೂರ್ಣ ಕಳಪೆಯಾಗಿರುವ ಕಾರಣ ಸಾಮಾನ್ಯ ವ್ಯಕ್ತಿ ಜೋರಾಗಿ ಕಾಲಿಂದ ಒದ್ದರೆ ಕಟ್ಟಿಗೆಯಿಂದ ಸರಿಸಿದರೂ ಕೂಡಾ ರಸ್ತೆಗೆ ಹಾಕಿದ ಕಡಿ,ಡಾಂಬಾರು ಕಿತ್ತು ಬರುತ್ತಿದೆ ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ₹9.29 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಇಷ್ಟೊಂದು ಕಳಪೆ ಮಾಡುವ ಮೂಲಕ ಜನರ ಹಣವನ್ನು ಗುತ್ತಿಗೆದಾರರು, ಅಧಿಕಾರಿಗಳು ಪೋಲು ಮಾಡಿದ್ದಾರೆ ಆದ್ದರಿಂದ ಅಂತವರ ವಿರುದ್ಧ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಲು ಮುಂದಾಗಬೇಕು ಹಾಗೂ ರಸ್ತೆಯನ್ನು ಮತ್ತೊಮ್ಮೆ ಅಭಿವೃದ್ಧಿ ಪಡಿಸಲು ಎನ್ನುವುದು ಹಾಲಕೆರೆ ನಿಡಗುಂದಿಕೊಪ್ಪ ನೆರೇಗಲ್ ಬೂದಿಹಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ-ಉಸ್ಮಾನ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.