ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮ ಪಂಚಾಯತಿ ಎದುರುಗಡೆ ಇರುವ ಟ್ರಾನ್ಸ್ ಫಾರ್ಂ ವಿದ್ಯುತ್ ತಂತಿಯಿಂದ ಎಮ್ಮೆ ಮೃತಪಟ್ಟಿದೆ ಸುಮಾರು 2.30ಕ್ಕೆ ಈ ಘಟನೆ ನಡೆದಿದ್ದು ಹೆಮ್ಮೆ ವಿದ್ಯುತ್ ಸ್ಪರ್ಶದಿಂದ ಸತ್ತಿರುವ ವಿಷಯ ತಿಳಿದ್ದರೂ ರಾತ್ರಿ 8 ಗಂಟೆಯಾದರೂ ಸ್ಥಳಕ್ಕೆ ಆಗಮಿಸದ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೆ ತುತ್ತ ಮುತ್ತಲಿನ ಹಳ್ಳಿಗಳಿಗೆ ಸುಮಾರು 6 ತಾಸು ಕರೆಂಟ್ ಇಲ್ಲ ಜೆಸ್ಕಾಂ ಅಧಿಕಾರಿಯಾದ ಸಿದ್ದಪ್ಪ ಅವರನ್ನು ಸಾರ್ವಜನಿಕರು ಪ್ರಶ್ನೆ ಮಾಡಿದರೆ ಮತ್ತು ಕಾಲ್ ಮಾಡಿದರೆ ಯಾವುದೇ ರೀತಿಯ ಸರಿಯಾದ ಮಾತುಗಳಿಲ್ಲ ಇವತ್ತು ಸಾರ್ವಜನಿಕರಿಗಾಗಿ ಅನೇಕ ಸೌಲಭ್ಯ ಜೊತೆಗೆ ಸರ್ಕಾರ ವಿದ್ಯುತ್ ಉಚಿತ ಎಂದು ನೀಡಿದರು ಅಧಿಕಾರಿಗಳು ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೌಲಭ್ಯ ದೊರೆಯುತ್ತಿಲ್ಲ ಸಿದ್ದಪ್ಪ ಜೆಸ್ಕಾಂ ಅಧಿಕಾರಿ ಸರ್ಕಾರಿ ಸಿಮ್ ಕಾರ್ಡ್ ಕೊಟ್ಟರು ಸಹ ಅದರಿಂದ ಸರಿಯಾಗಿ ಸಾರ್ವಜನಿಕರಿಗೆ ಸೇವೆ ನೀಡಲು ಆಗುತ್ತಿಲ್ಲ ಇಂತಹ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಮಾನ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ.ಎನ್‌ಟಿ ಶ್ರೀನಿವಾಸ್ ರವರು ಶೀಘ್ರದಲ್ಲಿ ಇಂತಹ ಅಧಿಕಾರಿಗಳ ಕಿತ್ತು ಹಾಕಬೇಕು ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಇದಲ್ಲದೆ ಜೆಸ್ಕಾಂ ಅಧಿಕಾರಿ ಸಿದ್ದಪ್ಪನ ಬಗ್ಗೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಪ್ರಕಾಶ್ ಎಡಬ್ಲ್ಯೂ ಇವರಿಗೆ ತಿಳಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಅವರ ನಿರ್ಲಕ್ಷತನದಿಂದ ಇವರು ಸಹ ಕೇವಲ ಲಾಭ ಬರುವ ಕೆಲಸಗಳಿಗೆ ಮಾತ್ರ ಕೈ ಹಾಕುತ್ತಾರೆ.ಹೊಲದಲ್ಲಿ ವಿದ್ಯುತ್ ತಂತಿಗಳು ಕೆಳಗೆ ಬಿದ್ದಿರುವುದು ಮತ್ತು ಪಕ್ಕ ರಸ್ತೆ ಪಕ್ಕದಲ್ಲಿಯೇ ಕಂಬನ್ ನೆಟ್ಟಿರುವುದು ಹಾಗೂ ವಿದ್ಯುತ್ ಕಂಬಗಳಿಗೆ ದುರಸ್ಥಿತಿಯಿಂದ ಮರದ ಬಳ್ಳಿಗಳು ಕೆಲವು ಕಂಬಗಳಿಗೆ ಅಂಟಿಕೊಂಡಿರುವುದರಿಂದ ರೈತರ ಬೋರ್ವೆಲ್ ಗಳಿಗೆ ಹಾಗೂ ಕೆಲವು ಮನೆಗಳಿಗೆ ವಿದ್ಯುತ್ತಿನ ಏರಿಳಿತದಲ್ಲಿ ಮನೆಯಲ್ಲಿರುವಂತಹ ಕೆಲವಾರು ಟಿವಿ ಫ್ರಿಡ್ಜ್ ಇನ್ನಿತರ ಉಪಕರಣಗಳು ಸುಟ್ಟಿರುವಂತಹ ಉದಾಹರಣೆಗಳು ಉಂಟು, ಆದರೂ ಸಹ ಇಂತವುಗಳ ಬಗ್ಗೆ ದೂರು ನೀಡಿದರು ಯಾವುದೇ ಈ ಸಮಸ್ಯೆ ನಮ್ಮದಲ್ಲ ಅನ್ನೋ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಇಂತಹ ಗತಿ ಕೂಡ್ಲಿಗಿ ತಾಲೂಕಿನ ಉಜ್ಜಿನಿ ಶಾಖೆಯ ಜೆಸ್ಕಾಂ ಅಧಿಕಾರಿಗಳಿಗೆ ಇವರ ಮೇಲಾಧಿಕಾರಿಗಳು ಇದ್ದಾರೋ ಇಲ್ಲವೋ ಅಥವಾ ಹೇಳೋರು ಕೇಳೋರು ಇಲ್ಲದ ಹಾಗೆ ನಡೆದುಕೊಳ್ಳುವ ಪರಿ ಇವತ್ತಿನ ವ್ಯವಸ್ಥೆಗೆ ಕಾರಣ ಆಗಿದ್ದಾರೆ ಇದರಿಂದ ಸಾರ್ವಜನಿಕರಿಗೆ ಯಾವ ರೀತಿ ನ್ಯಾಯ ಸಿಗುತ್ತದೆ ಎಂದು ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ರವರನ್ನು ಕೇಳುತ್ತಾ ಓಬಳೇಶ್ ರೇವಣ್ಣ ಮತ್ತು ವಸಂತ್ ಕುಮಾರ್ ಸದಸ್ಯರು ಮತ್ತು ಊರಿನ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮನವಿ ಮಾಡಿಕೊಂಡರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.