ಮುಂಡಗೋಡ:ಪಟ್ಟಣ ಪಂಚಾಯ್ತಿ ಆವರಣದಲ್ಲಿರುವ ಜಿಲ್ಲಾ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ನಗರ ಗ್ರಂಥಾಲಯದ ಕಟ್ಟಡದಲ್ಲಿ ಹಾಕಿರುವ ಶೀಟ್ ಗಳು ಒಡೆದು ಗ್ರಂಥಾಲಯ ಸಾಕಷ್ಟು ಸೋರುತ್ತಿದ್ದು,ಪ್ರತಿನಿತ್ಯ ಗ್ರಂಥಾಲಯಕ್ಕೆ ಕೆಲಸಕ್ಕೆ ಬರುವ ಸಿಬ್ಬಂದಿಗಳಿಗೆ ಸಾಕಷ್ಟು ದಿನಗಳಿಂದ ತೊಂದರೆ ಉಂಟಾಗುತ್ತಿದ್ದು, ಗ್ರಂಥಾಲಯದಲ್ಲಿ ನಿಲ್ಲುವ ನೀರನ್ನು ತುಂಬಿ ಹೊರಹಾಕಲು ಪ್ರತಿ ದಿನ 1 ರಿಂದ 2 ಗಂಟೆ ಇದೆ ಕೆಲಸ ಆಗಿದೆಯೆಂದು ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರ ಹೇಳಿಕೆ:ಗ್ರಂಥಾಲಯದಲ್ಲಿ ಮಳೆ ನೀರಿನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಕರುನಾಡ ಕಂದ ಪತ್ರಿಕೆ ಜಿಲ್ಲಾ ಗ್ರಂಥಾಲಯದ ಇಲಾಖೆಯ ಉಪ ನಿರ್ದೇಶಕರ ಸಂಪರ್ಕಿಸಿದಾಗ “ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು,ಇನ್ನೂ ಕೆಲವೇ ದಿನಗಳಲ್ಲಿ ಸಿಬ್ಬಂದಿಗಳು ಅನುಭವಿಸುತ್ತಿರುವ ಹಾಗೂ ಗ್ರಂಥಾಲಯದ ಸಮಸ್ಯೆಯನ್ನು ಪರಿಹರಿಸುವುದಾಗಿ ಅವರು ಹೇಳಿದರು”
ಒಟ್ಟಿನಲ್ಲಿ ಸಾಹಿತ್ಯಾಸಕ್ತರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ತುಂಬಾ ಸಹಾಯಕ ವಾಗಿರುವ ಈ ನಗರ ಗ್ರಂಥಾಲಯವನ್ನು ಸಮಸ್ಯೆ ಮುಕ್ತ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.