ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಪುರ ಹೋಬಳಿಯ ಪುದುರಾಮಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘಟಕದ ವಾರ್ಷಿಕೋತ್ಸವವನ್ನು ದೀಪ ಬೆಳಗುವುದರ ಮೂಲಕ ಹಾಗೂ ರೈತ ಗೀತೆ ಮೂಲಕ ಉದ್ಘಾಟನೆ ಮಾಡಲಾಯಿತು.
ರೈತ ಸಂಘಕ್ಕೆ ನೂತನವಾಗಿ ಸೇರ್ಪಡೆಗೊಂಡ ಪುದು ರಾಮಪುರ ಗ್ರಾಮಸ್ಥರಿಗೆ ಶಾಲನ್ನು ಹಾಕಲಾಯಿತು.
ಈ ವೇಳೆ ಮಾತನಾಡಿದ ಹನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ರೈತ ಸಂಘದ ಉದ್ದೇಶ ಭ್ರಷ್ಟಾಚಾರ ತೊಲಗಬೇಕು ಸಾರ್ವಜನಿಕರ ಕೆಲಸಗಳಲ್ಲಿ ರೈತ ಸಂಘದ ಅಧ್ಯಕ್ಷರು ಕಾರ್ಯಕರ್ತರು ಒಗ್ಗೂಡಬೇಕು.ಕೃಷಿ ಇಲಾಖೆಯಲ್ಲಿ 2019ರಲ್ಲಿ ಅನುದಾನವಿಲ್ಲದೆ ರೈತರಿಗೆ ಯಾವುದೇ ಪರಿಕಾರಗಳು ದೊರಕುತ್ತಿರಲಿಲ್ಲ,ರೈತ ಸಂಘಟನೆ ಮಾಡಿ ಸ್ಪಿಂಕ್ಲರ್ ಪೈಪ್,ಉತ್ತಮವಾದ ಬಿತ್ತನೆ ಬೀಜ,ಗುಣಮಟ್ಟದ ಔಷಧಿ ಇಂಥ ಸಮಸ್ಯೆಗಳು ರೈತ ಸಂಘಟನೆಯ ಮೂಲಕ ಬಗೆಹರಿದಿದೆ ಹನೂರು ತಾಲೂಕು ವ್ಯಾಪ್ತಿಯ ರಾಮಪುರ ಮಾರ್ಗಗಳಲ್ಲಿ ಸರ್ಕಾರಿ ಬಸ್ ಗಳು ಇಲ್ಲದ ಕಾರಣ ಚಳುವಳಿ ಮುಖಾಂತರ ಪ್ರತಿಭಟನೆ ಮಾಡ ಬೇಕಾಗುತ್ತದೆ.ರೈತ ಸಂಘದ ವಾರ್ಷಿಕೋತ್ಸವದ ಸಭೆ ಎಲ್ಲೂ ಮಾಡಿಲ್ಲ,ಈ ಕಾರ್ಯಕ್ರಮವು ಖುಷಿ ತಂದಿದೆ, ರೈತ ಸಂಘದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶಿವ ಮಲ್ಲು ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಶೈಲೆಂದ್ರ ಮಾತನಾಡಿ ರೈತ ಸಂಘದ ಸಂಘಟನೆಯಿಂದ ಶಕ್ತಿ ಬಂದಿದೆ ರೈತರ ಜಮೀನಿನಲ್ಲಿ ಕಾಡು ಪ್ರಾಣಿಗಳು ಬೆಳೆ ನಾಶಪಡಿಸಿದ ಸಮಯದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಪಡೆದುಕೊಳ್ಳಿ ಗ್ರಾಮೀಣ ಭಾಗದಲ್ಲಿ ವಯೋವೃದ್ದರು,ಅಂಗವಿಕಲರು,ಪಿಂಚಣಿ ಹಣವನ್ನ ಅಂಚೆ ಇಲಾಖೆ ನೌಕರರು ಲಂಚ ತೆಗೆದುಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ಲಂಚ ತೆಗೆದುಕೊಳ್ಳದ ರೀತಿ ಮಾಡಬೇಕು.ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು,ಆಧಾರ್,ಪಡಿತರ,ಬ್ಯಾಂಕ್ ಖಾತೆ ಸ್ಥಗಿತ ಮಾಡುವಂತೆ ಅಬಕಾರಿ ಇಲಾಖೆ, ಕಂದಾಯ ಇಲಾಖೆಗೆ ತಿಳಿಸಿದ್ದೇವೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ,ಗೌರವಾಧ್ಯಕ್ಷ ಮಹದೇವ್, ಗೌಡೇಗೌಡ,ರವಿನಾಯ್ಡು,ಚಂದ್ರು,ಬಸವರಾಜು, ವೆಂಕಟಾಚಲ,ರಾಜಣ್ಣ,ರಾಜಮಣಿ, ಪುಂಗೋಡಿ,ಕನಕಮ್ಮ,ವರದರಾಜು,ಯುವ ಘಟಕದ ಅಧ್ಯಕ್ಷ ಸೂರ್ಯ ಹಾಗೂ ಮಹಿಳಾ ಮತ್ತು ಪುರುಷ ರೈತರು,ಗ್ರಾಮಸ್ಥರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.