ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಮೀಪದ ಹಣವಾಳ ಕ್ಯಾಂಪಿನ ಶ್ರೀ ರಾಮನಗರಕ್ಕೆ ಹೋಗುವ ರಸ್ತೆ ಶಾಲಾ ಮಕ್ಕಳಿಗೆ ಅಪಾಯಕಾರಿ ರಸ್ತೆಯಾಗಿದೆ,ಗಂಗಾವತಿ ತಾಲೂಕಿನ ವಿದ್ಯಗಿರಿ ಎಂದು ಹೆಸರು ವಾಸಿಯಾಗಿರುವ ಶ್ರೀ ರಾಮನಗರಕ್ಕೆ ಅನೇಕ ಶಾಲಾ ಬಸ್ಸುಗಳು ಓಡಾಡುತ್ತಿದ್ದು,ಚಳ್ಳೂರು ಅಗೆದಾಳು,ತೊಂಡೆಹಾಳ,ಜೀರಾಳ ಕಲ್ಗುಡಿ, ಸಿಂಗನಾಳ,ಗ್ರಾಮದ ಸಾರ್ವಜನಿಕರು ಹಾಗೂ ಶಾಲೆ ಬಸ್ಸುಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ಸಾರ್ವಜನಿಕರು ಶಾಲಾ ಮಕ್ಕಳು ಓಡಾಡುತ್ತಿದ್ದಾರೆ, ಜನರ ಹತ್ತಿರ ಎಲೆಕ್ಷನ್ ಪ್ರಚಾರದಲ್ಲಿ ಬಂದ ಕನಕಗಿರಿ ಕ್ಷೇತ್ರದ ಶ್ರೀ ಮಾನ್ಯ ಶಿವರಾಜ್ ತಂಗಡಿಯವರು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಕೂಡಲೆ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದರು.




















